ಉಡುಪಿ | ಆನ್‌ ಲೈನ್ ಸಾಲ: ವ್ಯಕ್ತಿ ಆತ್ಮಹತ್ಯೆ

Prasthutha|

- Advertisement -

ಮಣಿಪಾಲ: ಆನ್‌ ಲೈನ್ ಸಾಲಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಣಿಪಾಲ ಹುಡ್ಕೊ ಕಾಲೋನಿ ಎಂಬಲ್ಲಿ ನಡೆದಿದೆ.

ಮೃತರನ್ನು ಶಿವಳ್ಳಿಯ ರಾಘವೆಂದ್ರ ಎ.ಶಾನಭಾಗ್(49) ಎಂದು ಗುರುತಿಸಲಾಗಿದೆ.

- Advertisement -

ಇವರು ಆನ್‌ ಲೈನ್‌ನಲ್ಲಿ ಸಾಲ ತೆಗೆದು ಕೊಂಡಿದ್ದರು. ಇದರಿಂದ ಫೋನ್ ಕರೆಗಳು ಬರುತ್ತಿದ್ದು ಈ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣ ದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಹಡಿಯ ಮೇಲೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.