Home ಟಾಪ್ ಸುದ್ದಿಗಳು ಉಡುಪಿ ಹತ್ಯಾಕಾಂಡ: ಮಂಗಳೂರಿನಲ್ಲಿ ಆರೋಪಿಯ ಮಹಜರು ಪ್ರಕ್ರಿಯೆ

ಉಡುಪಿ ಹತ್ಯಾಕಾಂಡ: ಮಂಗಳೂರಿನಲ್ಲಿ ಆರೋಪಿಯ ಮಹಜರು ಪ್ರಕ್ರಿಯೆ

ಮಂಗಳೂರು: ನೇಜಾರಿನಲ್ಲಿ ತಾಯಿ, ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕೊಲೆ ಆರೋಪಿ ಪ್ರವೀಣ್ ಚೌಗುಲೆಯನ್ನು ಮಂಗಳೂರಿನ ಆತನ ಮನೆಗೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.


ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ದು ಎಲ್ಲ ರೀತಿಯ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.


ನ.12ರಂದು ಬೆಳಗ್ಗೆ ನೇಜಾರಿನ ತೃಪ್ತಿ ಲೇಔಟ್ ನಲ್ಲಿ ಹಸೀನಾ( 48), ಮಕ್ಕಳಾದ ಅಫ್ನಾನ್ (23), ಅಯ್ನಾಝ್ (20) ಮತ್ತು ಅಸೀಮ್ (14) ಎಂಬವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು.

Join Whatsapp
Exit mobile version