ಉಡುಪಿ: ಸ್ಕೂಟರ್’ಗೆ ಕಾರು ಡಿಕ್ಕಿ ವ್ಯಕ್ತಿ ಸಾವು

Prasthutha|

ಉಡುಪಿ: ಸ್ಕೂಟರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಬಾಗಿಲಿನಿಂದ ಕಲ್ಸಂಕಕ್ಕೆ ಹೋಗುವ ರಸ್ತೆಯಲ್ಲಿ ನಡೆದಿದೆ.

- Advertisement -


ಮೃತರನ್ನು ಪುತ್ತೂರು ಗ್ರಾಮದ ಹನುಮಂತನಗರದ ನಿವಾಸಿ ರವಿಚಂದ್ರ ದೇವಾಡಿಗ (57) ಎಂದು ಗುರುತಿಸಲಾಗಿದೆ.


ಇವರು ಸ್ಕೂಟರ್ ನಲ್ಲಿ ಡಿವೈಡರ್ ಬಳಿ ತಿರುಗಿಸುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

Join Whatsapp
Exit mobile version