Home ಕರಾವಳಿ ಉಡುಪಿ: ಜಿಲ್ಲೆಯಲ್ಲಿ ತಂಗುವ ವಿದೇಶೀಯರ ಮಾಹಿತಿ ನೀಡುವುದು ಕಡ್ಡಾಯ

ಉಡುಪಿ: ಜಿಲ್ಲೆಯಲ್ಲಿ ತಂಗುವ ವಿದೇಶೀಯರ ಮಾಹಿತಿ ನೀಡುವುದು ಕಡ್ಡಾಯ

1946ರ ವಿದೇಶೀಯರ ಕಾಯ್ದೆ ಕಲಂ 7ರಂತೆ ಉಡುಪಿ ಜಿಲ್ಲೆಯ ಯಾವುದೇ ಸ್ಥಳದಲ್ಲಿ ವಿದೇಶೀಯರು ತಂಗಿದರೆ 24 ಗಂಟೆಗಳ ಒಳಗೆ ಅವರ ಮಾಹಿತಿಯನ್ನು ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿಗೆ ನೀಡುವುದು ಕಡ್ಡಾಯ ಎಂದು ಸುತ್ತೋಲೆ ಹೊರಡಿಸಲಾಗಿದೆ.

ವಿದ್ಯಾ ಸಂಸ್ಥೆ, ಹೋಟೆಲ್, ಮನೆ, ಛತ್ರ ಎಲ್ಲೇ ವಿದೇಶೀಯರು ಬಂದು ತಂಗಿದರೆ ಸಂಬಂಧಿಸಿದ ಸ್ಥಳ ಒದಗಿಸಿದವರು ಫಾರ್ಮ್ ಸಿ ಭರ್ತಿ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸತಕ್ಕದ್ದು.

ತಪ್ಪಿದರೆ 1946ರ ವಿದೇಶೀಯರ ಕಾಯ್ದೆಯ ಕಲಂ 14ರಂತೆ ಸಂಬಂಧಿಸಿದವರ ವಿರುದ್ಧ ಕ್ರಮ ಇರುತ್ತದೆ. 5 ವರುಷ ಜೈಲು ಶಿಕ್ಷೆ ಮತ್ತು ದಂಡ ಹಾಕಲು ಅವಕಾಶ ಇದೆ ಎಂದು ತಿಳಿಸಲಾಗಿದೆ.

Join Whatsapp
Exit mobile version