Home ಟಾಪ್ ಸುದ್ದಿಗಳು ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ : ಗುಜರಾತ್ FSLಗೆ ಮೊಬೈಲ್ ರವಾನೆ

ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ : ಗುಜರಾತ್ FSLಗೆ ಮೊಬೈಲ್ ರವಾನೆ

ಉಡುಪಿ: ಇಲ್ಲಿನ ಖಾಸಗಿ ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಆರೋಪಿ ಸ್ಥಾನದಲ್ಲಿರುವ ವಿದ್ಯಾರ್ಥಿನಿಯರ ಮೊಬೈಲ್‌ ಅನ್ನು ಗುಜರಾತ್‌ನ ವಿಧಿವಿಜ್ಞಾನ ಪ್ರಯೋಗಾಲಯ (FSL)ಗೆ ರವಾನೆ ಮಾಡಲಾಗಿದೆ.

ರಾಜ್ಯ ಎಫ್‌ಎಸ್‌ಎಲ್‌ ನಿಂದ ಮೊಬೈಲ್‌ನಲ್ಲಿ ಯಾವುದೇ ಫೋಟೋ ರಿಟ್ರೀವ್ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗುಜರಾತ್‌ನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನ ತಲುಪಿಸಲಾಗಿದ್ದು, CID ತಂಡ ವರದಿಗಾಗಿ ಕಾದು ಕುಳಿತಿದೆ.

ಉಡುಪಿ ಖಾಸಗಿ ಕಾಲೇಜೊಂದರ ಲೇಡಿಸ್‌ ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ, ಫೋಟೋಗಳು ಲಭ್ಯವಾಗಿಲ್ಲ. ಪೊಲೀಸರು ವಶಕ್ಕೆ ಪಡೆದಿದ್ದ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನೆ ಮಾಡಲಾಗಿತ್ತು. ಇದೀಗ ಗುಜರಾತ್‌ನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನ ರವಾನಿಸಲಾಗಿದೆ.

Join Whatsapp
Exit mobile version