ಉಡುಪಿ | ದನದ ಕಳೇಬರವನ್ನು ರಸ್ತೆಯಲ್ಲಿ ಎಸೆದ ಪ್ರಕರಣ: ಕೂಲಂಕಷ ತನಿಖೆಗೆ SDPI ಆಗ್ರಹ

- Advertisement -

ಉಡುಪಿ: ಜಿಲ್ಲೆಯ ಕುಂಜಾಲು ಎಂಬ ಪ್ರದೇಶದಲ್ಲಿ ದನದ ಕಳೇಬರಗಳನ್ನು ರಸ್ತೆಯಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಬದುಕುತ್ತಿರುವ ಕುಂಜಾಲು ಪರಿಸರದ ಜನರ ಮನಸ್ಸಿನಲ್ಲಿ ಕೋಮು ವಿಷವನ್ನು ಬಿತ್ತಿ ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಲು ಈ ರೀತಿಯ ಕೃತ್ಯಗಳನ್ನು ಮಾಡಿರುವ ಶಂಕೆಯಿದೆ. ಇದಕ್ಕಿಂತ ಮುಂಚೆಯೂ ಸಹ ಈ ಪರಿಸರದಲ್ಲಿ ಇಂತಹದೇ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿದ್ದರು.

ಅಲ್ಲದೆ ದನದ ವಿಷಯದಲ್ಲಿ ರಾಜಕೀಯವನ್ನು ಮಾಡಿ ಪಕ್ಷವೊಂದು ಜಿಲ್ಲೆಯಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿತ್ತು. ಆದ್ದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕುಷ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ ಇದರ ಹಿಂದೆ ಇರುವ ಷಡ್ಯಂತರವನ್ನು ಬಯಲಿಗೆಲೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

- Advertisement -


Must Read

Related Articles