Home ಟಾಪ್ ಸುದ್ದಿಗಳು ರಾಜೀನಾಮೆ ಪತ್ರ ಬರೆದಿಟ್ಟಿದ್ದೇನೆ, ಎಲ್ಲರೂ ಒಟ್ಟಾಗಿ ರಾಜ್ಯಪಾಲರಿಗೆ ಕೊಡೋಣ: ಬಂಡಾಯ ಶಾಸಕರಿಗೆ ಉದ್ಧವ್ ಠಾಕ್ರೆ ಸಂದೇಶ

ರಾಜೀನಾಮೆ ಪತ್ರ ಬರೆದಿಟ್ಟಿದ್ದೇನೆ, ಎಲ್ಲರೂ ಒಟ್ಟಾಗಿ ರಾಜ್ಯಪಾಲರಿಗೆ ಕೊಡೋಣ: ಬಂಡಾಯ ಶಾಸಕರಿಗೆ ಉದ್ಧವ್ ಠಾಕ್ರೆ ಸಂದೇಶ

ಒಬ್ಬ ಶಾಸಕ ಕೂಡ ನನ್ನ ವಿರುದ್ಧವಿದ್ದರೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ


ಮುಂಬೈ: ರಾಜೀನಾಮೆ ಪತ್ರ ಬರೆದಿಟ್ಟಿದ್ದೇನೆ, ನೀವೆಲ್ಲರೂ ಬನ್ನಿ, ಒಟ್ಟಾಗಿ ರಾಜ್ಯಪಾಲರ ಬಳಿ ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಕೊಡೋಣ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಂಡಾಯ ಶಾಸಕರಿಗೆ ಆಫರ್ ನೀಡಿದ್ದಾರೆ.
ಬುಧವಾರ ಫೇಸ್ ಬುಕ್ ಫೇಜ್ ನಲ್ಲಿ ಹೇಳಿಕೆ ನೀಡಿದ ಅವರು, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡಿಲ್ಲ. ಒಂದು ವೇಳೆ ಶಾಸಕರಿಗೆ ತಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದು ಇಷ್ಟವಿಲ್ಲದಿದ್ದರೆ ಹುದ್ದೆ ತ್ಯಜಿಸಲು ಸಿದ್ಧನಿದ್ದೇನೆ. ಮುಖ್ಯಮಂತ್ರಿ ನಿವಾಸದಿಂದ ಮಾತೋಶ್ರಿಗೆ ನನ್ನ ವಾಸವನ್ನು ಬದಲಿಸುತ್ತೇನೆ ಎಂದು ಹೇಳಿದರು.
ಓರ್ವ ಶಾಸಕ ಕೂಡ ನನ್ನ ವಿರುದ್ಧವಿದ್ದರೆ ನಾನು ಈ ಸ್ಥಾನದಲ್ಲಿ ಮುಂದುವರಿಯಲು ಇಚ್ಛಿಸುವುದಿಲ್ಲ. ಓರ್ವ ಶಾಸಕ ಕೂಡ ನನ್ನವಿರುದ್ಧ ಇದ್ದರೆ ಈ ಸ್ಥಾನದಲ್ಲಿ ಮುಂದುವರಿಯುವುದು ನಾಚಿಕೇಕೇಡು ಎಂದು ಉದ್ಧವ್ ಹೇಳಿದರು.
ಶಿವಸೇನೆಯ ಹಲವು ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದು ಅಸ್ಸಾಮ್ ನ ಗುವಾಹಟಿಯಲ್ಲಿ ತಂಗಿದ್ದು, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

ಹಿಂದುತ್ವ ಮತ್ತು ಶಿವಸೇನೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Join Whatsapp
Exit mobile version