►ಕೊನೆಗೂ ಪತನಗೊಂಡ ಮಹಾ ವಿಕಾಸ ಆಘಾಡಿ ಸರಕಾರ
ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮಹಾ ಆಘಾಡಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಎಂ ಸ್ಥಾನದ ಜೊತೆ ಎಂಎಲ್ ಸಿ ಸ್ಥಾನಕ್ಕೂ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅಧಿಕಾರ ರಾಜಕಾರಣದಿಂದ ಉದ್ಧವ್ ಹಿಂದೆ ಸರಿದಿದ್ದಾರೆ.
ಸರ್ಕಾರ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ವಿಫಲಗೊಂಡ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ.
ಎರಡೂವರೆ ವರ್ಷಗಳ ವರೆಗೆ ಅಧಿಕಾರ ನಡೆಸಿದ ಶಿವಸೇನೆ – ಎನ್ ಸಿ ಪಿ – ಕಾಂಗ್ರೆಸ್ ಸರಕಾರವು ಕೊನೆಗೂ ಪತನಗೊಂಡಿದೆ.
ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಬಂಡಾಯವೆದ್ದ ಶಿಂಧೆಯ ಸೇನೆ ಮತ್ತು ಬಿಜೆಪಿ ಸೇರಿ ಸರಕಾರವನ್ನು ರಚಿಸುವ ಎಲ್ಲಾ ಸಾಧ್ಯತೆಗಳಿವೆ.