Home ಟಾಪ್ ಸುದ್ದಿಗಳು ಉದ್ಧವ್ ಠಾಕ್ರೆ ಸರ್ಕಾರ ಮರುಸ್ಥಾಪನೆ ಅಸಾಧ್ಯ: ಶಿಂಧೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ರಿಲೀಫ್

ಉದ್ಧವ್ ಠಾಕ್ರೆ ಸರ್ಕಾರ ಮರುಸ್ಥಾಪನೆ ಅಸಾಧ್ಯ: ಶಿಂಧೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ರಿಲೀಫ್

ಮುಂಬೈ: ಉದ್ಬವ್ ಠಾಕ್ರೆ – ಏಕನಾಥ್ ಶಿಂಧೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ತೀರ್ಪಿ ನೀಡಿದ್ದು, ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಲು ಸಾದ್ಯವಿಲ್ಲ ಎಂದು ಹೇಳಿದೆ.


ಠಾಕ್ರೆ ಅವರ ಸರ್ಕಾರವನ್ನು ಮರುಸ್ಥಾಪಿಸುವ ವಿನಂತಿಯನ್ನು ಸಹ ಸುಪ್ರೀಂ ತಿರಸ್ಕರಿಸಿದೆ. ಉದ್ದವ್ ಠಾಕ್ರೆ ಫ್ಲೋರ್ ಟೆಸ್ಟ್ ಎದುರಿಸಿಲ್ಲ. ಅವರು ರಾಜೀನಾಮೆ ನೀಡಿದ ಕಾರಣ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಕರೆದಿರುವುದು ಸರಿಯಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.


ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಪೀಕರ್ ನಡೆಗೆ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ಉದ್ಧವ್ ಠಾಕ್ರೆ ಅವರು ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸುವಲ್ಲಿ ರಾಜ್ಯಪಾಲರು ತಪ್ಪು ಎಸಗಿದ್ದಾರೆ ಎಂದು ಶಿಂಧೆ ಬಣಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ನ್ಯಾಯಾಲಯ ಖಂಡಿಸಿತು.

Join Whatsapp
Exit mobile version