Home Uncategorized ಹಲವು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದ ಉದ್ಧವ್ ಠಾಕ್ರೆ

ಹಲವು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದ ಉದ್ಧವ್ ಠಾಕ್ರೆ

ಮುಂಬೈ: ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮತ್ತು ತಂದೆ ಸ್ಥಾಪಿಸಿದ ಪಕ್ಷದ ನಿಯಂತ್ರಣಕ್ಕಾಗಿ ಉದ್ಧವ್ ಠಾಕ್ರೆ, ಹಲವು ನಾಯಕರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ.

ಶಿಂಧೆ ಜೊತೆಗೂಡಿ ಪಕ್ಷ ಉರುಳಿಸಲು ಸಹಕರಿಸಿದ ಮಾಜಿ ಸಚಿವ ವಿಜಯ್ ಶಿವತಾರೆ, ಹಿಂಗೋಲಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಶಾಸಕ ಸಂತೋಷ್ ಬಂಗಾರ್, ಥಾಣೆ ಜಿಲ್ಲಾ ಮುಖ್ಯಸ್ಥ ಸ್ಥಾನದಿಂದ ನರೇಶ್ ಮ್ಹಾಸ್ಕೆ ಅವರನ್ನು ಠಾಕ್ರೆ ತಂಡ ವಜಾಗೊಳಿಸಿದೆ.

ಠಾಕ್ರೆ ಅವರು ಥಾಣೆ, ಪಾಲ್ಘರ್, ಅಮರಾವತಿ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ 100 ಕ್ಕೂ ಹೆಚ್ಚು ಹೊಸ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಹೊಸ ಪದಾಧಿಕಾರಿಗಳು ಬಂಡುಕೋರರು ಬಿಟ್ಟುಹೋದ ಖಾಲಿ ಹುದ್ದೆಗಳಿಗೆ ಎರಡನೇ ಹಂತದ ನಾಯಕ ಸ್ಥಾನವನ್ನು ಸ್ವೀಕರಿಸಲಿದ್ದಾರೆ.

ಇನ್ನು ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಎರಡೂ ಕಡೆಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ. ಪಕ್ಷಕ್ಕೆ ಸೇರಿದ 55 ಶಾಸಕರ ಪೈಕಿ 53 ಮಂದಿ ಅನರ್ಹತೆ ಪಟ್ಟಿಯಲ್ಲಿದ್ದಾರೆ. ಶಿಂಧೆ ಸೇರಿದಂತೆ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಠಾಕ್ರೆ ಪ್ರತಿಪಾದಿಸಿದ್ದಾರೆ.

Join Whatsapp
Exit mobile version