Home ಟಾಪ್ ಸುದ್ದಿಗಳು ಉದ್ಧವ್ ಠಾಕ್ರೆಗೆ ರಾಮಮಂದಿರ ಉದ್ಘಾಟನಾ ಆಹ್ವಾನದ ಅಗತ್ಯವಿಲ್ಲ: ಸಂಜಯ್ ರಾವುತ್

ಉದ್ಧವ್ ಠಾಕ್ರೆಗೆ ರಾಮಮಂದಿರ ಉದ್ಘಾಟನಾ ಆಹ್ವಾನದ ಅಗತ್ಯವಿಲ್ಲ: ಸಂಜಯ್ ರಾವುತ್

ಮುಂಬೈ: ಅಯೋಧ್ಯೆ ಜೊತೆ ಶಿವಸೇನೆಗೆ ಹಳೆಯ ನಂಟಿದ್ದು, ಹಾಗಾಗಿ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಉದ್ಧವ್ ಠಾಕ್ರೆ ಅವರಿಗೆ ಆಹ್ವಾನದ ಅಗತ್ಯವಿಲ್ಲ ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಿವ ಸೇನೆಯನ್ನು ಟೀಕಿಸಿದಾಗಲೆಲ್ಲಾ ಬಾಳಾ ಠಾಕ್ರೆ ಅವರು ಅದರ ಹೊಣೆ ಹೊತ್ತಿದ್ದರು ಎಂದು ಅವರು ನೆನಪಿಸಿದ್ದಾರೆ.

ನಾವು ಬಿಜೆಪಿಗಿಂತಲೂ ಮೊದಲು ಅಯೋಧ್ಯೆಯಲ್ಲಿದ್ದೆವು ಎಂದಿದ್ದಾರೆ.ಬಾಳಾ ಠಾಕ್ರೆ ಅವರ ಮುಂಬೈನ ಮಾತೋಶ್ರೀ ನಿವಾಸದಲ್ಲಿ ವಿಶ್ವ ಹಿಂದೂ ಪರಿಷತ್‌ನ ಮುಖ್ಯಸ್ಥರಾಗಿದ್ದ ಅಶೋಕ್ ಸಿಂಘಾಲ್ ಅವರು ಸಭೆ ನಡೆಸುತ್ತಿದ್ದರು. ಆ ಸಮಯದಲ್ಲಿ ಬಿಜೆಪಿ ಇರಲಿಲ್ಲ ಎಂದು ರಾವುತ್ ಹೇಳಿದ್ದಾರೆ.

ಠಾಕ್ರೆ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆಯೇ ಎಂಬ ಪ್ರಶ್ನೆಗೆ ರಾವುತ್ ಹೀಗೆ ಉತ್ತರಿಸಿದ್ದಾರೆ.

Join Whatsapp
Exit mobile version