Home ಟಾಪ್ ಸುದ್ದಿಗಳು ಯುಎಪಿಎ: 4 ಸಾವಿರಕ್ಕೂ ಹೆಚ್ಚು ಮಂದಿ ಬಂಧನ, 149 ಜನರಿಗೆ ಶಿಕ್ಷೆ

ಯುಎಪಿಎ: 4 ಸಾವಿರಕ್ಕೂ ಹೆಚ್ಚು ಮಂದಿ ಬಂಧನ, 149 ಜನರಿಗೆ ಶಿಕ್ಷೆ

►ಪ್ರತಿ ವರ್ಷ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು

ನವದೆಹಲಿ: 2018 ಮತ್ತು 2020 ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಸರಿಸುಮಾರು 4,960 ಜನರನ್ನು ಬಂಧಿಸಲಾಗಿದ್ದು , ಅದರಲ್ಲಿ 149 ಜನರ ಮಾತ್ರ ಆರೋಪ ಸಾಬೀತಾಗಿದೆ ಮತ್ತು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಂಸದ ಸಂದೋಶ್ ಕುಮಾರ್ ಪಿ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ)  ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, 2018 ರಲ್ಲಿ 479, 2019 ರಲ್ಲಿ 498 ಮತ್ತು 2020 ರಲ್ಲಿ 361 ಬಂಧನಗಳಾಗಿವೆ ಎಂದು ಅವರು ಹೇಳಿದರು.

ರಾಯ್, 2018 ರಲ್ಲಿ 332, 2019 ರಲ್ಲಿ 386 ಮತ್ತು 2020 ರಲ್ಲಿ 225 ರೊಂದಿಗೆ ಮಣಿಪುರವು ಕಾಯ್ದೆಯಡಿ ಎರಡನೇ ಅತಿ ಹೆಚ್ಚು ಬಂಧನಗಳನ್ನು ದಾಖಲಿಸಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ, 2018 ರಲ್ಲಿ 177, 2019 ರಲ್ಲಿ 227 ಮತ್ತು 2020 ರಲ್ಲಿ ಯುಎಪಿಎ ಅಡಿಯಲ್ಲಿ 346 ಜನರನ್ನು ಬಂಧಿಸಲಾಗಿದೆ. ಪ್ರತಿ ವರ್ಷ ಬಂಧಿಸಲಾದವರಲ್ಲಿ ಹೆಚ್ಚಿನವರು 18-30 ವರ್ಷದೊಳಗಿನವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿ ವರ್ಷವೂ ಯುಎಪಿಎ ಕಾಯ್ದೆಯಡಿ ಅತೀ ಹೆಚ್ಚು ಬಂಧನವಾಗುವುದು ಉತ್ತರ ಪ್ರದೇಶದಲ್ಲಾಗಿದೆ. ಸರಕಾರನ್ನು ವಿಮರ್ಶಿಸುವ ಹಲವರಿಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದು ಅದರಲ್ಲಿ ಆರೋಪ ಸಾಬೀತಾಗದ ಹಲವರೂ ಬಂಧನದಲ್ಲಿದ್ದಾರೆ.

Join Whatsapp
Exit mobile version