Home ಟಾಪ್ ಸುದ್ದಿಗಳು ನಾಳೆ ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ

ನಾಳೆ ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: 2020ರ ಫೆಬ್ರವರಿಯಲ್ಲಿ ನಡೆದ ಗಲಭೆಗೆ ಪಿತೂರಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರು ಜಾಮೀನು ಅರ್ಜಿಯ ಕುರಿತು ಜಾಮೀನು ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ನಾಳೆ ತೀರ್ಪು ಪ್ರಕಟಿಸಲಿದೆ.

ಎರಡು ವರ್ಷಗಳಿಂದ ಬಂಧಿತರಾಗಿರುವ ಉಮರ್ ಖಾಲಿದ್ ಅರ್ಜಿಯ ಆದೇಶವನ್ನು ಸೆಪ್ಟೆಂಬರ್ 9 ರಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರ ಪೀಠವು ಕಾಯ್ದಿರಿಸಿತ್ತು.

ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರದಲ್ಲಿ ತನಗೆ “ಕ್ರಿಮಿನಲ್ ಪಾತ್ರ” ಇಲ್ಲ ಅಥವಾ ಪ್ರಕರಣದ ಇತರ ಆರೋಪಿಗಳೊಂದಿಗೆ ಯಾವುದೇ “ಪಿತೂರಿಯ ಸಂಪರ್ಕ” ಇಲ್ಲ ಎಂದು ಖಾಲಿದ್ ವಾದಿಸಿದ್ದಾರೆ.

Join Whatsapp
Exit mobile version