ಮಂಗಳೂರು: ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್ ರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮವು ಫೆ.10ರಿಂದ ಪ್ರಾರಂಭಗೊಂಡು ಮಾರ್ಚ್ 6ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಲಿದೆ.
2022ರ ಫೆಬ್ರವರಿ 10ರಂದು ಸಂಜೆ ನಾಲ್ಕು ಗಂಟೆಗೆ ತಾಜುಲ್ ಉಲಮಾರ ಸುಪುತ್ರ ಕೂರತ್ ತಂಙಳ್ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಫೆ.10 ರಿಂದ ಮಾ.4ರವರೆಗೆ ರಾತ್ರಿ ಧಾರ್ಮಿಕ ಮುಖಂಡರುಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದ್ದು,ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ರಾಜಕೀಯ ಮುಖಂಡರು ಮತ್ತು ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ. ಉರೂಸ್ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಸನದುದಾನ ಮಹಾಸಮ್ಮೇಳನ, ಮದನಿ ಸಂಗಮ, ಮದನಿ ಮೌಲೂದ್ ಪಾರಾಯಣ, ಬೃಹತ್ ಮೆಡಿಕಲ್ ಕ್ಯಾಂಪ್, ಸರ್ವ ಧರ್ಮ ಮುಖಂಡರ ಸಮ್ಮೇಳನ, ಸಂದಲ್ ಮೆರವಣಿಗೆ, ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಎಂದು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.