ಜಗತ್ತಿನಲ್ಲೇ ವಾಸಕ್ಕೆ ಯುಎಇ ಅತ್ಯಂತ ಸುರಕ್ಷಿತ ದೇಶ

Prasthutha: December 1, 2021

ಅಬುಧಾಬಿ: ಕೋವಿಡ್ ನಿರ್ವಹಣೆಯ ಶ್ರೇಯಾಂಕದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೊದಲ ಸ್ಥಾನದಲ್ಲಿದ್ದು, ನಿವಾಸಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಎಮಿರೇಟ್ಸ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಸಾಂಕ್ರಾಮಿಕ ರೋಗವನ್ನು ಒಳಗೊಂಡಿರುವ ವಿಷಯದಲ್ಲಿ ಯುಎಇ ರಾಷ್ಟ್ರವು ಯುರೋಪ್ ಅನ್ನು ಮೀರಿಸಿದೆ. ಮಾತ್ರವಲ್ಲ ಓಮಿಕ್ರಾನ್ ಬಗ್ಗೆ ಭೀತಿಯಿಲ್ಲದೆ ಜೀವಿಸಲು ಉತ್ತಮ ಸ್ಥಳವೆಂದು ಸೂಚಿಸಿದೆ.

ಅಕ್ಟೋಬರ್ ಮಧ್ಯದಿಂದ ದಿನವೊಂದಕ್ಕೆ ನೂರಕ್ಕಿಂತ ಕಡಿಮೆ ಪ್ರಕರಣ, ಸಾವುಗಳು ವರದಿಯಾಗುತ್ತಿದ್ದವು.

ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ಅಪಾಯದ ಬಗ್ಗೆ ಎಚ್ಚರಿಸಿದ ಬೆನ್ನಲ್ಲೇ ಪ್ರಪಂಚದಾದ್ಯಂತ ಅಫ್ರಿಕನ್ ದೇಶಗಳ ಪ್ರಯಾಣಿಕರ ಮೇಲೆ ನಿಷೇಧ ಹೇರಿದೆ. ಮಾತ್ರವಲ್ಲ ಓಮಿಕ್ರಾನ್ ಹಿನ್ನೆಲೆಯಲ್ಲಿ ಏಳು ಆಫಿಕನ್ ದೇಶಗಳಿಂದ ಪ್ರಯಾಣ ನಿರ್ಬಂಧಗಳನ್ನು ವಿಧಿಸಿದ್ದು, ಯುಎಇ ಗೆ ಆಗಮಿಸುವವರಿಗೆ ಕನಿಷ್ಠ 14 ದಿನಗಳ ಕಾಲ ಮೂರನೇ ರಾಷ್ಟ್ರಗಳಲ್ಲಿ ಕ್ವಾರಂಟೈನ್ ಕಡ್ಡಾಯವಾಗಲಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!