Home ಗಲ್ಫ್ ಮೂರು ತಿಂಗಳಲ್ಲಿ 5,000 ಇಸ್ರೇಲಿಗರಿಗೆ ಪೌರತ್ವ ನೀಡಿದ UAE

ಮೂರು ತಿಂಗಳಲ್ಲಿ 5,000 ಇಸ್ರೇಲಿಗರಿಗೆ ಪೌರತ್ವ ನೀಡಿದ UAE

ಹೊಸದಿಲ್ಲಿ: ಪೌರತ್ವ ಕಾನೂನಿಗೆ ತಿದ್ದುಪಡಿ ತಂದ ನಂತರ UAE ಕಳೆದ ಮೂರು ತಿಂಗಳಲ್ಲಿ 5,000 ಇಸ್ರೇಲಿಗರಿಗೆ ಪೌರತ್ವ ನೀಡಿದೆ ಎಂದು ವರದಿಯಾಗಿದೆ.

ಎಮಿರೇಟ್ಸ್ ಪೌರತ್ವವನ್ನು ನೀಡುವುದರೊಂದಿಗೆ ಇಸ್ರೇಲ್ ಪ್ರಜೆಗಳಿಗೆ ಮುಂಗಡ ವೀಸಾಗಳಿಲ್ಲದೆ ಪರ್ಷಿಯನ್ ಗಲ್ಫ್ ಮತ್ತು ಅರಬ್ ದೇಶಗಳಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ಎಮಿರೇಟ್ಸ್ ಲೀಕ್ಸ್ ವರದಿ ಮಾಡಿದೆ. ಆಕ್ರಮಿತ ರಾಷ್ಟ್ರ ಇಸ್ರೇಲ್ ಜೊತೆಗಿನ ಸಂಬಂಧದಿಂದಾಗಿ UAE ತನ್ನ ಧಾರ್ಮಿಕ ಕಾನೂನುಗಳನ್ನು ಬದಲಾಯಿಸಿತ್ತು. ಮದ್ಯಪಾನ ನಿಯಂತ್ರಣ ಮತ್ತು ಅವಿವಾಹಿತ ಯುವಕ-ಯುವತಿಯರು ಜೊತೆಯಾಗಿ ವಾಸಿಸುವುದಕ್ಕೆ ನಿರ್ಬಂಧ ಇನ್ನಿತರ ಹಲವಾರು ಕಾನೂನುಗಳನ್ನು ಬದಲಾವಣೆ ಮಾಡಲಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ UAE ಮತ್ತು ಬಹ್ರೈನ್ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಿತ್ತು.

Join Whatsapp
Exit mobile version