Home ಟಾಪ್ ಸುದ್ದಿಗಳು ಕರಾವಳಿಯ ಯುವ ಉದ್ಯಮಿಗೆ ಯುಎಇ ಗೋಲ್ಡನ್ ವೀಸಾ

ಕರಾವಳಿಯ ಯುವ ಉದ್ಯಮಿಗೆ ಯುಎಇ ಗೋಲ್ಡನ್ ವೀಸಾ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಿಶೇಷ ಸ್ಥಾನ ಪಡೆದ ವ್ಯಕ್ತಿಗಳಿಗೆ ಕೊಡುವ ಗೋಲ್ಡನ್ ವೀಸಾ ಪಡೆದ ಹೆಗ್ಗಳಿಕೆಗೆ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಕೊಲ್ಲರ ಕೋಡಿ ನಿವಾಸಿಯಾಗಿರುವ  ಯುವ ಉದ್ಯಮಿ ಮುಹಮ್ಮದ್ ಇಸಾಕ್ ಕುಂಞಿ (40) ಪಾತ್ರ ರಾಗಿದ್ದಾರೆ.

ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಸಿಕೊಂಡ ಕೌಶಲ್ಯಯುತ ಉದ್ಯಮದ ಮೂಲಕ ಯುಎಇ ಸರ್ಕಾರದ ಗಮನ ಸೆಳೆದಿರುವ ಮುಹಮ್ಮದ್ ಇಸಾಕ್ ಕೇವಲ 10 ವರ್ಷದಲ್ಲಿ ಯುಎಇಯಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ.

2006ರಲ್ಲಿ ಪದವಿ ಪೂರೈಸಿ ದುಬೈಗೆ ತೆರಳಿ, ಆರು ವರ್ಷ ಪ್ರತಿಷ್ಠಿತ ಅರೇಬಿಯನ್ ಪ್ರಿಂಟಿಂಗ್ ಸಂಸ್ಥೆಯೊಂ ದರಲ್ಲಿ ಎಕ್ಸಿ ಕ್ಯೂಟಿವ್ ಆಗಿ ದುಡಿದರು. ಪ್ರಿಂಟಿಂಗ್ ಕುರಿತಾಗಿ ಹೆಚ್ಚಿನ ಕೌಶಲ್ಯ ಬೆಳೆಸಿ, ತಾನೂ ಉದ್ಯಮ ಸ್ಥಾಪಿಸಬೇಕೆಂಬ ಕನಸು ಹೊತ್ತು 2012ರಲ್ಲಿ ಸಹರಾ ಪ್ರಿಂಟಿಂಗ್ ಪಬ್ಲಿಶಿಂಗ್ ಆ್ಯಂಡ್ ಡಿಸ್ಟ್ ಎಲ್‌ಎಲ್‌ಸಿ ಸ್ಥಾಪಿಸಿ ಹಂತಹಂತವಾಗಿ ಬೆಳೆದು, ಇದೀಗ ನಾಲ್ಕು ಕಂಪನಿಗಳನ್ನು ಆರಂಭಿಸಿದ್ದಾರೆ.

ವೈದ್ಯೆಯಾಗಿರುವ ಪತ್ನಿ, ಮೂವರು ಪುತ್ರರ ಜೊತೆ ದುಬೈಯಲ್ಲೇ ನೆಲೆಸಿರುವ ಮುಹಮ್ಮದ್ ಇಸಾಕ್ 2019ರಲ್ಲಿ ಪರಿಚ ಯಿಸಲ್ಪಟ್ಟಈ ದೀರ್ಘಾವಧಿ ವೀಸಾ ಮೂಲಕ ಏನನ್ನಾದರೂ ಸಾಧಿಸುವ ಛಲ ತೊಟ್ಟಿದ್ದಾರೆ.ಕಳೆದ ಜ.25ರಂದು ಗೋಲ್ಡನ್ ವೀಸಾ ಪಡೆದಿದ್ದು, 2032ರ ಜ.24ಕ್ಕೆ ವೀಸಾ ರಿನೀವಲ್ ಆಗಲಿದೆ.

Join Whatsapp
Exit mobile version