ಅಫ್ಘಾನಿಸ್ತಾನಕ್ಕೆ ಯುಎಇ ತುರ್ತು ನೆರವು, ಚೀನಾ ಪ್ರಮುಖ ಸಹಭಾಗಿ

Prasthutha|

ಅಫ್ಘಾನಿಸ್ತಾನ: ಹೊಸ ಆಡಳಿತದಲ್ಲಿ ಅಫ್ಘಾನಿಸ್ತಾನ ಸರಕಾರವು‌ ಚೀನಾವನ್ನು ಪ್ರಮುಖ ಸಹಭಾಗಿಯಾಗಿ ಸ್ವೀಕರಿಸಿದೆ ಎಂದು ತಾಲಿಬಾನ್ ಆಡಳಿತ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದರು.

ಅಫ್ಘಾನಿಸ್ತಾನವನ್ನು ಮರು ಕಟ್ಟುವಲ್ಲಿ, ರೈಲು, ರಸ್ತೆ, ಕೈಗಾರಿಕೆ ವಿಸ್ತರಿಸುವಲ್ಲಿ ಚೀನಾದ ನೆರವು ಸಿಗಲಿದೆ. ಆ ಮೂಲಕ ಆಫ್ರಿಕಾ, ಯೂರೋಪ್ ಜೊತೆಗೆ ವ್ಯಾಪಾರ ವ್ಯವಹಾರ ಸಂಪರ್ಕ ಕುದುರಿಸಲಾಗುವುದು ಎಂದು ಅವರು ಹೇಳಿದರು.

- Advertisement -

ಅಫ್ಘಾನಿಸ್ತಾನದಲ್ಲಿ ಅಪಾರ ತಾಮ್ರದ ನಿಕ್ಷೇಪಗಳು ಇದ್ದು, ಅದರ ಆಳದ ಗಣಿಗಾರಿಕೆ ಮತ್ತು ಅದರ ವಿಶ್ವ ವ್ಯಾಪಿ ವ್ಯಾಪಾರ ಕುದುರಿಸಲು ಚೀನಾದ ನೆರವು ದೇಶದ ಆರ್ಥಿಕತೆ ಮರುಕಟ್ಟುವ ಮಾರುಕಟ್ಟೆ ವಿಸ್ತರಣೆ ಕುದುರಿಸಲಿದೆ ಎಂದು ಸಹ ಜಬೀ ಉಲ್ಲಾ ಮುಜಾಹಿದ್ ಹೇಳಿದರು.

ಈ ನಡುವೆ ಯುಎಇ ವಿಮಾನದ ಮೂಲಕ ತುರ್ತು ಆಹಾರ ಮತ್ತು ವೈದ್ಯಕೀಯ ನೆರವು ರವಾನಿಸಿದೆ. 1996- 2001ರ ನಡುವೆ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿದ್ದ ಮೂರು ದೇಶಗಳಲ್ಲಿ ಯುಎಇ- ಯುನೈಟೆಡ್ ಅರಬ್ ಎಮಿರೇಟ್ಸ್ ಸಹ ಒಂದಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.

- Advertisement -