Home ಗಲ್ಫ್ ಯುಎಇಯಲ್ಲಿ ಬೋಟ್ ದುರಂತ| ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಮೃತ್ಯು

ಯುಎಇಯಲ್ಲಿ ಬೋಟ್ ದುರಂತ| ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಮೃತ್ಯು

ಶಾರ್ಜಾ: ಶಾರ್ಜಾದ ಖೋರ್ಫುಕಾನ್‌ನಲ್ಲಿ ಬೋಟ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಕೇರಳದ ಕುರಂಬಾಲ ಚೆರುತ್ತಿಟ್ಟ ನಿವಾಸಿ ಪ್ರಶಾಂತ್ ಮತ್ತು ಮಂಜುಷಾ ದಂಪತಿಯ ಪುತ್ರ ಪ್ರಣವ್ (7) ಮೃತ ವಿದ್ಯಾರ್ಥಿ.

ಅಬುಧಾಬಿಯ ಶಾಲೆಯೊಂದರಲ್ಲಿ ಎರಡನೇ ತರಗತಿ ಓದುತ್ತಿದ್ದ ಪ್ರಣವ್ ಅಪಘಾತದ ನಂತರ ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಕಾಸರಗೋಡು ನೀಲೇಶ್ವರಂ ಮೂಲದ ಅಭಿಲಾಷ್ ವಾಜವಲಪಿಲ್ (38) ಅಪಘಾತದ ದಿನವೇ ಮೃತಪಟ್ಟಿದ್ದರು. ಮೃತ ಪ್ರಣವ್ ಸೇರಿದಂತೆ ಮೂವರು ಚಿಕಿತ್ಸೆ ಪಡೆಯುತ್ತಿದ್ದರು.

ಈದ್ ಹಬ್ಬದ ದಿನ ಅಪರಾಹ್ನ 3.40ಕ್ಕೆ ವಿಹಾರಕ್ಕೆ ತೆರಳಿದ್ದ ಬೋಟ್ ಮಗುಚಿ ಬಿದ್ದಿದ್ದು, ಪ್ರಯಾಣಿಕರು ಸಮುದ್ರಕ್ಕೆ ಬಿದ್ದಿದ್ದಾರೆ. ದಡದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಬೋಟ್‌ನಲ್ಲಿ ಒಟ್ಟು 18 ಮಂದಿ ಇದ್ದರು.

ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡಗಳು, ಆಂಬ್ಯುಲೆನ್ಸ್, ಪೊಲೀಸರು ಮುಂತಾದವರು ಸ್ಥಳಕ್ಕೆ ಆಗಮಿಸಿ ಕೋಸ್ಟ್ ಗಾರ್ಡ್ ಸಹಕಾರದೊಂದಿಗೆ ಸಮುದ್ರಕ್ಕೆ ಬಿದ್ದ ಎಲ್ಲರನ್ನೂ ದಡಕ್ಕೆ ತಂದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು.

Join Whatsapp
Exit mobile version