ಭಾರತ ಸೇರಿ 14 ದೇಶಗಳಿಗೆ ಹೋಗದಂತೆ ತನ್ನ ಪ್ರಜೆಗಳಿಗೆ ನಿರ್ಬಂಧ ಹೇರಿದ ಯುಎಇ

Prasthutha|

ದುಬೈ: ಕೊರೋನಾ ಸೋಂಕು ತಡೆ ನಿಟ್ಟಿನಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ವಿಶ್ವದ 14 ರಾಷ್ಟ್ರಗಳ ಪ್ರವಾಸಕ್ಕೆ ತೆರಳದಂತೆ ತನ್ನ ಪ್ರಜೆಗಳಿಗೆ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಸೂಚಿಸಿದೆ.
ಪ್ರಜೆಗಳು ಭಾರತ, ಪಾಕಿಸ್ಥಾನ, ನೇಪಾಳ,ಬಾಂಗ್ಲಾದೇಶ, ಶ್ರೀಲಂಕಾ, ವಿಯೆಟ್ನಾಂ, ನಮಿಬಿಯಾ, ಝಾಂಬಿಯಾ, ಕಾಂಗೊ, ಉಗಾಂಡಾಗೆ ಹೋಗಬಾರದು ಎಂದು ತಿಳಿಸಿದೆ.

- Advertisement -


ಯುಎಇಯ ಪ್ರಧಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ಜೂನ್‌ನಲ್ಲಿ ನೀಡಿದ ನೋಟಿಸ್‌ನಲ್ಲಿ ಲೈಬೀರಿಯಾ, ನಮೀಬಿಯಾ, ಸಿಯೆರಾ ಲಿಯೋನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ, ಜಾಂಬಿಯಾ, ವಿಯೆಟ್ನಾಂ, ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಂದ ಬರುವ ವಿಮಾನಗಳ ಮೇಲೆ ಜುಲೈ 21, 2021 ರ ರಾತ್ರಿ 23:59 ರವರೆಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.


ಆದಾಗ್ಯೂ, ಸರಕು, ವ್ಯವಹಾರ ಮತ್ತು ಚಾರ್ಟರ್ ಫ್ಲೈಟ್‌ಗಳಿಗೆ ಈ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ.
ಯುಎಇ ತನ್ನ ಎಲ್ಲಾ ನಾಗರಿಕರಿಗೆ ತಮ್ಮ ಆತಿಥೇಯ ರಾಷ್ಟ್ರಗಳ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ನೀಡಿದೆ.



Join Whatsapp