Home ಗಲ್ಫ್ ಜುಲೈ 21 ರ ವರೆಗೆ UAE ಗೆ ಭಾರತೀಯ ಯಾತ್ರಿಕರ ಪ್ರವೇಶ ನಿಷೇಧ

ಜುಲೈ 21 ರ ವರೆಗೆ UAE ಗೆ ಭಾರತೀಯ ಯಾತ್ರಿಕರ ಪ್ರವೇಶ ನಿಷೇಧ

ದುಬೈ: ಯು.ಎ.ಇ ಸರ್ಕಾರ ಭಾರತ, ಪಾಕಿಸ್ತಾನ, ಶ್ರೀಲಂಕ, ಬಾಂಗ್ಲಾದೇಶಗಳ ಯಾತ್ರಿಕರ ನಿಷೇಧವನ್ನು ಜುಲೈ 21 ರ ವರೆಗೆ ವಿಸ್ತರಿಸಿದೆ ಎಂದು ದುಬೈ ಮೂಲದ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಏರ್ ಲೈನ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ ದೇಶಗಳ ಯಾತ್ರಿಕರನ್ನು ಜುಲೈ 21 ರ ವರೆಗೆ ಕೊಂಡೊಯ್ಯದಂತೆ ಎಮಿರೇಟ್ಸ್ ಸಂಸ್ಥೆಗೆ ಯು.ಎ.ಇ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಈ ದೇಶಗಳ ಯಾತ್ರಿಕರು ಮುಂದಿನ 14 ದಿನಗಳ ಕಾಲ ದುಬೈ ಪ್ರಯಾಣ ಸಾಧ್ಯವಿಲ್ಲವೆಂದು ಸಂಸ್ಥೆ ತಿಳಿಸಿದೆ.

ಭಾರತೀಯರು ಅಧಿಕೃತ ವಿಸಾ ಹೊಂದಿದ್ದರೂ ಯು.ಎ.ಇ ಪ್ರವೇಶಕ್ಕೆ ಏಪ್ರಿಲ್ 24 ರಿಂದ ನಿಷೇಧ ಹೇರಲಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಭಾರತದ ಯಾತ್ರಿಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಪ್ರಾರಂಭಿಸುವಂತೆ ಭಾರತ ಒತ್ತಾಯಿಸಿದೆ.

Join Whatsapp
Exit mobile version