ಮಲ್ಟಿಪಲ್ ಎಂಟ್ರಿ ವಿಸಿಟ್ ವೀಸಾ ವ್ಯವಸ್ಥೆಗೊಳಿಸಿದ ಯುಎಇ ಸರ್ಕಾರ

Prasthutha|

ಅಬುಧಾಬಿ: ಯುಎಇ ಸರ್ಕಾರ ಐದು ವರ್ಷಗಳ ಮಲ್ಟಿಪಲ್ ಎಂಟ್ರಿ ಟೂರಿಸ್ಟ್ ವೀಸಾ ವ್ಯವಸ್ಥೆಗೊಳಿಸಿದ್ದು, ಅರ್ಜಿ ನೀಡಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಸಿಟಿಝನ್ ಶಿಪ್ (ಐಸಿಎ) ತಿಳಿಸಿದೆ. ಮಾತ್ರವಲ್ಲ ಎಲ್ಲಾ ರಾಷ್ಟ್ರಗಳ ಯಾತ್ರಿಕರು ಈ ಸೌಲಭ್ಯಗಳನ್ನು ಸದುಪಯೋಗ ಪಡೆಯಬಹುದೆಂದು ಹೇಳಿದೆ.

- Advertisement -

ಐದು ವರ್ಷಗಳ ವೀಸಾವನ್ನು ಪ್ರವಾಸಿಗರಿಗೆ ಸ್ವಯಂ ಪ್ರಾಯೋಜಕತ್ವದಲ್ಲಿ ಅನೇಕ ಬಾರಿ ಯುಎಇ ಪ್ರವೇಶಿಸಲು ಮತ್ತು ಪ್ರತಿ ಭೇಟಿಯಲ್ಲೂ 90 ದಿನಗಳ ಯುಎಇ ನಲ್ಲಿ ಉಳಿಯಲು ಅನುವು ಮಾಡಿ ಕೊಡಲಾಗಿದೆ. ಮಾತ್ರವಲ್ಲ 90 ದಿನಗಳವರೆಗೆ ಈ ವೀಸಾವನ್ನು ವಿಸ್ತರಿಸಬಹುದು. ಐಸಿಎ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರು 650 ದಿರ್ಹಮ್ ಅನ್ನು ಪಾವತಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಆಸಕ್ತ ಅರ್ಜಿದಾರರು ನೇರವಾಗಿ ಐಸಿಎ ವೆಬ್ ಸೈಟ್ ಆದ www.ica.gov.ae ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ ಅರ್ಜಿದಾರರು ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ಒಳಗೊಂಡಂತೆ ಡಾಕ್ಯುಮೆಂಟ್ ಗಳನ್ನು ನೇರವಾಗಿ ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡಬಹುದು ಎಂದು ಪ್ರಾಧಿಕಾರ ಮಾಹಿತಿ ನೀಡಿದರು.

Join Whatsapp