ವಾಷಿಂಗ್ಟನ್: ಶ್ರೀಲಂಕಾದಲ್ಲಿ ಸದ್ಯ ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಅಧ್ಯಕ್ಷ ಗೊಟಬಯ ಅವರಿಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ಅವರು ಹಿಂದೆ ದ್ವಿರಾಷ್ಟ್ರ ಪ್ರಜೆಯಾಗಿದ್ದರು. ಶ್ರೀಲಂಕಾ ಮತ್ತು ಅಮೆರಿಕದ ಪ್ರಜೆಯಾಗಿದ್ದ ಅವರು ವಿದೇಶಿ ಪ್ರಜೆಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ 2019ರ ಚುನಾವಣೆಗೆ ಮುಂಚಿತವಾಗಿ ಅಮೆರಿಕನ್ ಪೌರತ್ವವನ್ನು ತ್ಯಜಿಸಿದ್ದರು.
ಅಭೂತಪೂರ್ವ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ಅವರ ಅಧಿಕಾರವಧಿಯಲ್ಲಿ ದೇಶ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಆಕ್ರೋಶಿತ ಜನತೆ ಶ್ರೀಲಂಕಾದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ. ಆಕ್ರೋಶಿತ ಪ್ರತಿಭಟನಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗುತ್ತಿದ್ದಂತೆ ಗೊಟಬಯ ಅಲ್ಲಿಂದ ಓಡಿ ಹೋಗಿದ್ದರು. ಸದ್ಯ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.