ಲಕ್ನೋ: ಜೈ ಶ್ರೀರಾಂ ಎನ್ನುತ್ತಾ ಮುಸ್ಲಿಂ ಕುಟುಂಬಕ್ಕೆ ಬಣ್ಣ ಹಚ್ಚುವ ಮೂಲಕ ಕಿರುಕುಳ ನೀಡಿದ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.
ಬೈಕಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ಗುಂಪೊಂದು ಜೈಶ್ರೀರಾಂ ಎನ್ನುತ್ತಾ ಬಲವಂತವಾಗಿ ಬಣ್ಣಗಳನ್ನು ಹಚ್ಚಿ ನೀರನ್ನು ಎಸೆಯುವುದನ್ನು ತೋರಿಸುವ ವೈರಲ್ ವೀಡಿಯೊವನ್ನು ನೋಡಬಹುದಾಗಿದೆ.
ಬಿಜ್ನೋರ್ ಪೊಲೀಸರು ಪ್ರಕಾರ, ಈ ಘಟನೆ ಮಾರ್ಚ್ 20 ರ ಬುಧವಾರ ನಗರದ ಧಮ್ಪುರ್ ಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ಪೊಲೀಸರು ಗಮನಿಸಿದ್ದಾರೆ. ಈ ವೈರಲ್ ವೀಡಿಯೊದಲ್ಲಿ, ಕೆಲವರು ಬೈಕ್‌ನಲ್ಲಿ ಹೋಗುತ್ತಿದ್ದ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಬಲವಂತವಾಗಿ ಬಣ್ಣಗಳನ್ನು ಹಚ್ಚುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಬಿಜ್ಮೋರ್ ಪೊಲೀಸರು ದುಷ್ಕರ್ಮಿಗಳನ್ನು ಗುರುತಿಸುತ್ತಿದ್ದಾರೆ ಎಂದು ಬಿಜ್ನೋರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್ಪಿ) ನೀರಜ್ ಜದುವಾನ್ ಎಕ್ಸ್ನಲ್ಲಿ ವೀಡಿಯೊದಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬವನ್ನು ವೈಯಕ್ತಿಕವಾಗಿ ತಲುಪಲು ಮತ್ತು ಕೇಸ್ ಫೈಲ್ ಮಾಡಲು ಧಂಪುರದ ಸರ್ಕಲ್ ಆಫೀಸರ್‌ಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.