Home ಟಾಪ್ ಸುದ್ದಿಗಳು ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು

ಶಿವಮೊಗ್ಗ: ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ಶಿವಮೊಗ್ಗದ ಕುರುಬರ ಪಾಳ್ಯದಲ್ಲಿ ನಡೆದಿದೆ.


ಕಾಲೇಜು ವಿದ್ಯಾರ್ಥಿಗಳಾದ ಮೊಯಿನ್ ಖಾನ್ ಮತ್ತು ಅಂಜುಂ ಖಾನ್ ನೀರಿನಲ್ಲಿ ಕಣ್ಮರೆಯಾದವರು.

ಸವಾಯಿಪಾಳ್ಯದ ಮೊಯಿನ್ ಖಾನ್(18), ಇಲ್ಯಾಸ್ ನಗರದ ಅಂಜುಂ ಖಾನ್(18) ಇಬ್ಬರೂ ಬೇರೆ ಕೆಲವು ಸ್ನೇಹಿತರ ಜತೆ ಮೀನು ಹಿಡಿಯಲೆಂದು ನದಿ ತೀರಕ್ಕೆ ಬಂದಿದ್ದರು. ಅಲ್ಲಿ ನೀರಿಗಿಳಿದು ಮೀನು ಹಿಡಿಯುತ್ತಾ ಸುಳಿಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version