Home ಟಾಪ್ ಸುದ್ದಿಗಳು ಗೂಡ್ಸ್ ಆಟೋ ಡಿಕ್ಕಿ: ಇಬ್ಬರು ಯುವತಿಯರು ಗಂಭೀರ!

ಗೂಡ್ಸ್ ಆಟೋ ಡಿಕ್ಕಿ: ಇಬ್ಬರು ಯುವತಿಯರು ಗಂಭೀರ!

►ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಶಿವಮೊಗ್ಗ: ​ ಆಟೋ ಡಿಕ್ಕಿಯಾಗಿ ಪಾದಚಾರಿಗಳಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಬಿ.ಹೆಚ್‌ ರಸ್ತೆಯಲ್ಲಿ ನಡೆದಿದ್ದು, ಈ ಕುರಿತ ಭಯಾನಕ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಾಗರದ ಎಸ್ ಎನ್ ನಗರದ ಆಫ್ರಿನಾ ಬಾನು ಹಾಗೂ ಸಿಮ್ರಿನ್​ ಗಂಭೀರ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೂಡ್ಸ್​ ಆಟೋ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version