Home ಕರಾವಳಿ ಸುಳ್ಯ: ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಮೃತ್ಯು !

ಸುಳ್ಯ: ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಮೃತ್ಯು !

ಮಂಗಳೂರು: ಹಳೆಯ ಶೌಚಾಲಯದ ದುರಸ್ತಿಯ ವೇಳೆ ನಡೆದ ದುರಂತದಲ್ಲಿ ಮಹಿಳೆಯರಿಬ್ಬರು ಸಾವನ್ನಪ್ಪಿದ ಘಟನೆ ಎಣ್ಮೂರಿನ ನರ್ಲಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ಬೀಪಾತುಮ್ಮ ಮತ್ತು ನೆಬಿಸಾ ಎಂದು ಗುರುತಿಸಲಾಗಿದೆ.

ಎಣ್ಮೂರಿನ ನೆರ್ಲಡ್ಕದ ನಿವಾಸಿಯಾದ ಹರೀಶ್ ನಾಯ್ಕ್ ಎಂಬಾತನ ಮನೆಯ ಹಳೆಯ ಶೌಚಾಲಯ ದುರಸ್ತಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ದುರಸ್ತಿ ಕಾರ್ಯದಲ್ಲಿ ನಿರತರಾದ ಇತರ ಕಾರ್ಮಿಕರ ಜೊತೆ ನೆರೆಮನೆಯ ಬೀಪಾತುಮ್ಮ ಮತ್ತು ನೆಬಿಸಾ ಎಂಬಿಬ್ಬರು ದುರಸ್ತಿ ಕಾರ್ಯಕ್ಕೆ ನೆರವಾಗುತ್ತಿದ್ದ ವೇಳೆ ಶೌಚಾಲಯದ ಗೋಡೆ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ಳಾರೆ ಎಸ್.ಐ. ಆಂಜನರೆಡ್ಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಕಲ್ಲಡ್ಕ ಸೇರಿದಂತೆ ಹಲವರು ದುರಂತ ಜಾಗಕ್ಕೆ ಧಾವಿಸಿದ್ದಾರೆ.

Join Whatsapp
Exit mobile version