ನವದೆಹಲಿ: ಭಾರತದ ಅತ್ಯಂತ ಐಷಾರಾಮಿ ಹೋಟೆಲ್‌ಗಳನ್ನು ನಿರ್ಮಾಣ ಮಾಡಿರುವ ಟಾಟಾ ಗ್ರೂಪ್‌ನ ಇಂಡಿಯನ್ ಹೋಟೆಲ್ಸ್ ಕಂಪನಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದ ಸುಹೇಲಿ ಹಾಗೂ ಕದ್ಮತ್ ದ್ವೀಪಗಳಲ್ಲಿ ಎರಡು ತಾಜ್ ಬ್ರ್ಯಾಂಡ್‌ನ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಭಾರತದ ಅತಿ ದೊಡ್ಡ ಹಾಸ್ಪಿಟಾಲಿಟಿ ಕಂಪನಿಯಾದ ಐಎಚ್‌ಸಿಎಲ್, ರಾಜಸ್ಥಾನ, ಕೇರಳ, ಗೋವಾ ಹಾಗೂ ಅಂಡಮಾನ್‌ಗಳಂಥ ಸ್ಥಳಗಳನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಇರಿಸಿರುವ ನಮ್ಮ ಬದ್ಧತೆಯೇ ಲಕ್ಷದ್ವೀಪದಲ್ಲಿ ಕೆಲಸ ಮಾಡಲಿದೆ ಎಂದು ಟಾಟಾ ಕಂಪನಿ ತಿಳಿಸಿದೆ.
ಈ ರೆಸಾರ್ಟ್‌ಗಳು 2026ರಲ್ಲಿ ಆರಂಭವಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ, ದ್ವೀಪದ ಪರಿಸರ ವ್ಯವಸ್ಥೆಯ ಸುಸ್ಥಿರತೆ ಹಾಗೂ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಟಾಟಾ ತಿಳಿಸಿದೆ. ಐಎಚ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪುನೀತ್ ಛತ್ವಾಲ್ ಮಾತನಾಡಿ, ಈ ರೆಸಾರ್ಟ್‌ಗಳು ಪ್ರವಾಸಿಗರಿಗೆ ವಿಶಿಷ್ಟವಾದ ಮತ್ತು ವಿಭಿನ್ನವಾದ ಅನುಭವವನ್ನು ನೀಡುತ್ತವೆ ಮತ್ತು ಪರಿಸರದ ಮೇಲೆ ಯಾವುದೇ ಕೆಟ್ಟ ಪ್ರಭಾವವನ್ನು ಈ ರೆಸಾರ್ಟ್‌ಗಳು ಬೀರೋದಿಲ್ಲ ಎಂದು ತಿಳಿಸಿದ್ದಾರೆ.