ಕಟಪಾಡಿ : ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕಾ ಬೋಟೊಂದು ಸಮುದ್ರದಲ್ಲಿ ಮುಳುಗಿದ್ದು, ಇದರಲ್ಲಿದ್ದ ಬಿಹಾರ ಮೂಲದ ಇಬ್ಬರು ಯುವಕರು, ಬೇರೆ ಬೋಟ್ ನೆರವಿನಿಂದ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಬೋಟೊಂದು ಕಡಲ ಅಬ್ಬರಕ್ಕೆ ಮುಳುಗಿದ್ದ ಸಂದರ್ಭ ಟ್ಯೂಬ್ ಅಳವಡಿಸಿಕೊಂಡು ಈಜುತ್ತಾ ದಡ ಸೇರುವ ಸಾಹಸ ಮಾಡಿದ ಯುವಕರು ಬೋಟ್ ವೊಂದರ ನೆರವು ಪಡೆದು, ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಒಬ್ಬ ಕಡಲಿನ ತೆರೆಗಳ ಅಬ್ಬರದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಸ್ಥಳೀಯರ ಮತ್ತು ವಿವಿಧ ಇಲಾಖಾಧಿಕಾರಿಗಳ ಸಹಕಾರದಿಂದ ದಡ ಸೇರಿದ ಯುವಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.