ರಾಯ್ ಪುರ : ಆನೆಗಳ ದಾಳಿಗೆ ಇಬ್ಬರು ಮೃತ ಪಟ್ಟಿರುವ ಘಟನೆ ಛತ್ತೀಸ್ ಗಢದ ಸೂರಜ್‌ಪುರ ಪ್ರೇಮನಗರದಲ್ಲಿ ನಡೆದಿದೆ.
ಸೂರಜ್‌ಪುರ ಪ್ರೇಮ್‌ನಗರದಲ್ಲಿ ಓರ್ವ ಮಹಿಳೆ ಮತ್ತು ಪುರುಷ ಮೇಲೆ ಆನೆಗಳು ದಾಳಿ ನಡೆಸಿದ್ದು ಘಟನೆಯಲ್ಲಿ ಸಿಲುಕಿದ ಇಬ್ಬರೂ ಮೃತ ಪಟ್ಟಿದ್ದಾರೆ.
ವಿಷಯ ತಿಳಿದ ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಎಂದು ಅರಣ್ಯ ರಕ್ಷಕ ರಾಮಚಂದ್ರ ಪ್ರಜಾಪತಿ ಎಂಬವರು ಮಾಹಿತಿ ನೀಡಿದ್ದಾರೆ.