Home ಟಾಪ್ ಸುದ್ದಿಗಳು ಗುಜರಾತ್ ಫಾರ್ಮಾ ಕಂಪೆನಿಯಲ್ಲಿ ಸ್ಫೋಟ: ಇಬ್ಬರ ಸಾವು

ಗುಜರಾತ್ ಫಾರ್ಮಾ ಕಂಪೆನಿಯಲ್ಲಿ ಸ್ಫೋಟ: ಇಬ್ಬರ ಸಾವು

ಅಹ್ಮದಾಬಾದ್; ಸೋಮವಾರ ರಾತ್ರಿ ಗುಜರಾತ್ ವಲ್ಸದ್ ಜಿಲ್ಲೆಯ ಫಾರ್ಮಾ ಕಂಪೆನಿಯೊಂದರಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಡೆದಿದೆ.
ವಲ್ಸದ್ ಜಿಲ್ಲೆಯ ಸಾರಿಗಮ್ ಜಿಐಡಿಸಿ ಪ್ರದೇಶದ ವಾನ್ ಪೆಟ್ರೋಕೆಮ್ ಫಾರ್ಮಾ ಕಂಪೆನಿಯಲ್ಲಿ ದಿಢೀರನೆ ಸ್ಫೋಟ ಸಂಭವಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಈ ದುರಂತದಲ್ಲಿ ಕಟ್ಟಡದ ಒಂದು ಭಾಗವು ಬಿರಿದು ಬಿದ್ದಿದೆ. ಗಾಯಗೊಂಡವರನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.
ಘಟನೆ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಬೆಂಕಿ ನಂದಕರು ಇಲ್ಲಿ ಬೆಂಕಿ ಆರಿಸಲು ನೀರು ಉಪಯೋಗಿಸುವಂತಿರಲಿಲ್ಲ. ಅಲ್ಲಿ ಸ್ಫೋಟಕ್ಕೆ ಕಾರಣವಾದ ರಾಸಾಯನಿಕ ಅರಿತ ಮೇಲಷ್ಟೆ ಅವರು ಬದಲಿ ದಾರಿ ಹಿಡಿಯಬೇಕು.


“ನಮಗೆ ಬೆಂಕಿ ಬಿದ್ದದ್ದಾಗಿ ಕರೆ ಬಂತು. ಇಲ್ಲಿಯವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಾವು ಅಗ್ನಿಶಾಮಕದಳದವರು ಇಲ್ಲಿಗೆ ಬಂದು ಸೇರಿದಾಗ ಇಲ್ಲಿ ಭದ್ರತೆಯವರು ಯಾರೂ ಇರಲಿಲ್ಲ. ಅಲ್ಲಿ ಯಾವು ರಾಸಾಯನಿಕದಿಂದ ಸ್ಫೋಟ ಆಯಿತು ಎಂದು ತಿಳಿಯದೆ ನಾವು ಕಾರ್ಯಾಚರಣೆ ನಡೆಸುವಂತಿರಲಿಲ್ಲ.” ಸಾರಿಗಾಮ್’ನ ಫೈರ್ ಫೈಟರ್ ರಾಹುಲ್ ಮುರಾರಿ ಹೇಳಿದರು.
ಘಟನೆಗೆ ಸರಿಯಾದ ಕಾರಣ ಮತ್ತು ಇತರ ಕೆಲಸಗಾರರ ಸ್ಥಿತಿಗತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದೂ ಅವರು ತಿಳಿಸಿದರು

Join Whatsapp
Exit mobile version