Home ಟಾಪ್ ಸುದ್ದಿಗಳು ಕಂಟೈನರ್ ಪಲ್ಟಿ: ಇಬ್ಬರು ಸಾವು, ನಾಲ್ವರು ಗಂಭೀರ

ಕಂಟೈನರ್ ಪಲ್ಟಿ: ಇಬ್ಬರು ಸಾವು, ನಾಲ್ವರು ಗಂಭೀರ

ರಾಯಗಢ: ಕಂಟೈನರ್ ಪಲ್ಟಿಯಾಗಿ ಡಿವೈಡರ್ ಜಿಗಿದು ಐದು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ- ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ.


ಜಿಲ್ಲೆಯ ಖೋಪೋಲಿ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಕಂಟೈನರ್ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಂಟೈನರ್ ಪಲ್ಟಿ ಹೊಡೆದು ಎದುರಿನಿಂದ ಇನ್ನೊಂದು ಲೇನ್ ನಲ್ಲಿ ಬರುತ್ತಿದ್ದ ಐದು ವಾಹನಗಳಿಗೆ ಡಿಕ್ಕಿ ಹೊಡೆದಿದೆ.


ಪುಣೆಯಿಂದ ಮುಂಬೈಗೆ ತೆರಳುತ್ತಿದ್ದ ಕಂಟೈನರ್ ಅತಿವೇಗದ ಕಾರಣ ನಿಯಂತ್ರಣ ತಪ್ಪಿ ಇನ್ನೊಂದು ಲೇನ್ ಗೆ ದಾಟಿದ ಬಳಿಕ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version