Home ಟಾಪ್ ಸುದ್ದಿಗಳು ಭೀಕರ ರಸ್ತೆ ಅಫಘಾತ: ಬಜರಂಗದಳದ ಇಬ್ಬರು ನಾಯಕರ ಸಾವು

ಭೀಕರ ರಸ್ತೆ ಅಫಘಾತ: ಬಜರಂಗದಳದ ಇಬ್ಬರು ನಾಯಕರ ಸಾವು

ಇಂದೋರ್: ಎರಡು ಹಸುಗಳಿಗೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಂಘಪರಿವಾರದ ನಾಯಕರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರಾಜ್ ಗಢದಿಂದ ವರದಿಯಾಗಿದೆ.

ಮೃತರನ್ನು ರಾಜ್ ಗಢದ ಬಜರಂಗದಳದ ಸಹ ಸಂಚಾಲಕ ಲೇಖ್ ರಾಜ್ ಸಿಸೋಡಿಯಾ ಮತ್ತು ಹಿಂದೂ ಜಾಗರಣ್ ಮಂಚ್ ನ ಪ್ರಧಾನ ಕಾರ್ಯದರ್ಶಿ ಲಖನ್ ನೇಜರ್ ಎಂದು ಗುರುತಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರು ಬರ್ಖೇಡಾ ಗ್ರಾಮದ ಬಳಿಯ ಬಾವಿಗೆ ಬಿದ್ದಿದೆ. ಅಪಾಯವನ್ನರಿತ ಚಾಲಕ ರಾಹುಲ್ ಜೋಶಿ ಕಾರಿನಿಂದ ಜಿಗಿದಿದ್ದಾರೆ. ಸದ್ಯ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಮಧ್ಯೆ ಕಾರಿನೊಳಗೆ ಸಿಲುಕಿ ಹಾಕಿಕೊಂಡ ಈ ಇಬ್ಬರು ನಾಯಕರು ಅಸುನೀಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕ್ರೇನ್ ಮೂಲಕ ಸತತ ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಕಾರನ್ನು ಹೊರತೆಗೆದಿದ್ದಾರೆ.

Join Whatsapp
Exit mobile version