ಪಶ್ಚಿಮ ಬಂಗಾಳ | ಕೋವಿಡ್ ಲಸಿಕೆ ಸ್ವೀಕರಿಸಿದ ಇಬ್ಬರು ಸಾವು

Prasthutha|

ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಲಸಿಕೆ ಪಡೆದ ಇಬ್ಬರು ಸಾವನಪ್ಪಿದ್ದಾರೆ. ಡಾರ್ಜಿಲಿಂಗ್ ಜಿಲ್ಲೆಯ ಪರುಲ್ ದತ್ತ ಮತ್ತು ಧುಗ್ಪುರಿ ಜಿಲ್ಲೆಯ ಕೃಷ್ಣ ದತ್ತ ಸಾವನ್ನಪ್ಪಿದ್ದವರಾಗಿದ್ದಾರೆ.

ಇಬ್ಬರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದೆ. ಆದಾಗ್ಯೂ ಅಂತಿಮ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ನಂತರವಷ್ಟೇ ಸಾವು ಯಾವ ರೀತಿ ಸಂಭವಿಸಿದೆ ಎಂದು ಗೊತ್ತಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

- Advertisement -

ಪಶ್ಚಿಮ ಬಂಗಳಾದಲ್ಲಿ  ಮಾ.8 ಮತ್ತು 9 ರಂದು  ಕೋವಿಡ್ ಲಸಿಕೆ ಹಾಕಿಸಿಕೊಂಡ ನಂತರ ಎರಡು ಕೋವಿಡ್ ಸಾವು ಸಂಭವಿಸಿದೆ. ಇಬ್ಬರು 65 ವರ್ಷ ದಾಟಿದವರಾಗಿದ್ದು, ಈಗಾಗಲೇ ಇಬ್ಬರು ಹೃದಯ ಸಂಬಂಧಿ ರೋಗಿಗಳಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -