Home ಟಾಪ್ ಸುದ್ದಿಗಳು ಛತ್ತೀಸ್ ಘಡದಲ್ಲಿ ಮುಂದುವರಿದ ಕ್ರೈಸ್ತರ ಮೇಲಿನ ದಾಳಿ: ಬೈಬಲ್ ಸುಟ್ಟು, ಪಾದ್ರಿಗಳಿಗೆ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

ಛತ್ತೀಸ್ ಘಡದಲ್ಲಿ ಮುಂದುವರಿದ ಕ್ರೈಸ್ತರ ಮೇಲಿನ ದಾಳಿ: ಬೈಬಲ್ ಸುಟ್ಟು, ಪಾದ್ರಿಗಳಿಗೆ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

ನವದೆಹಲಿ: ಛತ್ತೀಸ್ ಘಡದ ಧಮ್ತೇರಿ ಜಿಲ್ಲೆಯಲ್ಲಿ ಇಬ್ಬರು ಕ್ರಿಶ್ಚಿಯನ್ ಪಾದ್ರಿಗಳನ್ನು ಸಂಘಪರಿವಾರದ ದುಷ್ಕರ್ಮಿಗಳ ಗುಂಪೊಂದು ನಿರ್ದಯವಾಗಿ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

ಆಕ್ರೋಶಿತ ಸಂಘಪರಿವಾರದ ಗುಂಪು, ಚರ್ಚ್ ಗೆ ಅಕ್ರಮ ಪ್ರವೇಶಗೈದು ಪ್ರಾರ್ಥನಾ ಸಭೆಗೆ ಅಡ್ಡಿಪಡಿಸಿತು. ಈ ವೇಳೆ ಅಲ್ಲಿದ್ದ ಇಬ್ಬರು ಪಾದ್ರಿಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬೈಬಲ್ ಗಳನ್ನು ಸುಟ್ಟು ಹಾಕಿದರು. ಮಾತ್ರವಲ್ಲ ಕ್ರಿಶ್ಚಿಯನ್ ಧಾರ್ಮಿಕ ಪೂಜೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ದಾಂಧಲೆ ನಡೆಸಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ರಜನಿಕಾಂತ್ ದೇವಘನ್ ಮತ್ತು ನೀಲಾಂಬರಿ ಸಾಹು ನೇತೃತ್ವದ ಸಂಘಪರಿವಾರದ ಗುಂಪು ಪ್ರಾರ್ಥನಾ ಸಭೆಗೆ ಅಡ್ಡಿಪಡಿಸಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ವೇಳೆ ಪ್ರಾರ್ಥನೆ ಬೋಧಿಸುತ್ತಿದ್ದ ಪಾದ್ರಿಗಳಾದ ಶರತ್ ಮಾಣಿಕಪುರಿ ಮತ್ತು ಕೇಸರ್ ಮಾಣಿಕಪುರಿ ಎಂಬವರನ್ನು ಸಂಘಪರಿವಾರದ ಗುಂಪು ಎಳೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದೆ.

ಕ್ರಿಶ್ಚಿಯನ್ನರನ್ನು ಮೂಲ ಹಿಂದೂ ಧರ್ಮಕ್ಕೆ ಹಿಂದಿರುಗುವಂತೆ ಒತ್ತಾಯಿಸಿದರಲ್ಲದೆ, ಪೂಜಾ ಕಾರ್ಯಕ್ರಮವನ್ನು ಮುಂದುವರಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸ್ಥಳೀಯರು ದೂರಿದ್ದಾರೆ.

Join Whatsapp
Exit mobile version