ಎರಡು ದೋಣಿ ಪರಸ್ಪರ ಢಿಕ್ಕಿ: ಓರ್ವ ಸಾವು , 35ಕ್ಕೂ ಅಧಿಕ ಮಂದಿ ನಾಪತ್ತೆ !

Prasthutha|

ನಿಮತಿಘಾಟ್: ಎರಡು ದೋಣಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸುಮಾರು 35 ಮಂದಿ ಕಾಣೆಯಾಗಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿರುವುದಾಗಿ  ಅಸ್ಸೋಂನ ಜೊರ್ಹಾತ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ನಿಮತಿಘಾಟ್​ ನಲ್ಲಿ ಘಟನೆ ಸಂಭವಿಸಿದೆ.

- Advertisement -

ಸುಮಾರು 120ಕ್ಕೂ ಹೆಚ್ಚು ಮಂದಿ ನೀರೊಳಗೆ ಬಿದ್ದಿದ್ದರು. ಈ ವೇಳೆ ಹಲವರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಹುತೇಕರನ್ನು ರಕ್ಷಣೆ ಮಾಡಲಾಗಿದೆ.

ಬುಧವಾರ 3.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಮಾ ಕಮಲ ದೋಣಿ ನಿಮಾತಿ ಘಾಟ್ ನಿಂದ ಮಜುಲಿಗೆ ಸಂಚರಿಸುತ್ತಿದ್ದಾಗ ಮಜುಲಿಯಿಂದ ವಾಪಸ್ಸಾಗುತ್ತಿದ್ದ ಸರ್ಕಾರಿ ಸ್ವಾಮ್ಯದ ಟ್ರಿಪ್ಕೈಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಲ್ಲಿಯವರೆಗೆ ಕನಿಷ್ಠ 35 ಜನರನ್ನು ರಕ್ಷಿಸಲಾಗಿದೆ. ದೋಣಿಯಲ್ಲಿ ಸುಮಾರು 75 ಜನರು ಇದ್ದರು ಮತ್ತು ಸುಮಾರು 35 ಜನರು ನಾಪತ್ತೆಯಾಗಿದ್ದಾರೆ. ಬಲವಾದ ನೀರಿನ ಪ್ರವಾಹದ ಕಾರಣ ಕಾರ್ಯಾಚರಣೆಗೆ ತೊಡಕು ಉಂಟಾಗಿತ್ತು . ಡಿಕ್ಕಿಯಾದ ನಂತರ, ಒಂದು ಮುಳುಗಿದೆ. ಎರಡನೇ ದೋಣಿ ಕೂಡ ಮುಳುಗುವ ಹಂತದಲ್ಲಿತ್ತು. ಆದರೆ ಪೊಲೀಸರು ಮತ್ತು ಸ್ಥಳೀಯರು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರ ಎಂದು ಜೋರ್ಹತ್ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಜೈನ್ ತಿಳಿಸಿದ್ದಾರೆ.

- Advertisement -

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.



Join Whatsapp