ಬಂಟ್ವಾಳ: ಸಿದ್ದಕಟ್ಟೆ ಸಮೀಪದ ಸೋರ್ನಾಡುವಿನಲ್ಲಿ ನಡೆದ ಟಿಪ್ಪರ್ – ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಸವಾರರನ್ನು ಕಮಲ್ ಕಟ್ಟೆ ನಿವಾಸಿ ನಿತಿನ್ ಹಾಗೂ ಶಶಿರಾಜ್ ಎಂದು ಗುರುತಿಸಲಾಗಿದೆ. ಶಶಿರಾಜ್ ವೃತ್ತಿಯಲ್ಲಿ ಪಿಕಪ್ ಚಾಲಕನಾಗಿದ್ದರು ಎಂದು ತಿಳಿದುಬಂದಿದೆ.
ಬಿಸಿರೋಡು ಕಡೆಗೆ ಸಿದ್ದಕಟ್ಟೆಯಿಂದ ಹೋಗುತ್ತಿದ್ದ ಟಿಪ್ಪರ್ ನೇರವಾಗಿ ಬೈಕ್’ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಅದಾಗ್ಯೂ ಘಟನೆಯ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಲೆತ್ನಿಸಿದ್ದು ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News