Home ಟಾಪ್ ಸುದ್ದಿಗಳು ಹನಿಟ್ರ್ಯಾಪ್ ಮಾಡಲು ಬ್ಲ್ಯಾಕ್ ಮೇಲ್; ಆತ್ಮಹತ್ಯೆಗೆ ಯತ್ನಿಸಿದ್ದ ರೂಪದರ್ಶಿಯ ಇಬ್ಬರು ಸ್ನೇಹಿತರ ಬಂಧನ

ಹನಿಟ್ರ್ಯಾಪ್ ಮಾಡಲು ಬ್ಲ್ಯಾಕ್ ಮೇಲ್; ಆತ್ಮಹತ್ಯೆಗೆ ಯತ್ನಿಸಿದ್ದ ರೂಪದರ್ಶಿಯ ಇಬ್ಬರು ಸ್ನೇಹಿತರ ಬಂಧನ

ಜೋಧಪುರ; ಯುವ ರೂಪದರ್ಶಿಯೊಬ್ಬಳು ತಾನು ತಂಗಿದ್ದ ಹೊಟೇಲ್’ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವತಿ ಹಾಗೂ ಯುವಕನನ್ನು ಜೋಧಪುರ ಪೊಲೀಸರು ಬಂಧಿಸಿದ್ದಾರೆ.
ಅಕ್ಷತ್ ಹಾಗೂ ದೀಪಾಲಿ ಎಂಬುವವರನ್ನು ಉದಯ್’ಪುರ್ ಎಂಬಲ್ಲಿಂದ ಬಂಧಿಸಿರುವುದಾಗಿ ತಿಳಿಸಿರುವ ಅಧಿಕಾರಿಗಳು, ಇವರಿಬ್ಬರೂ ಆತ್ಮಹತ್ಯೆಗೆ ಯತ್ನಿಸಿದ ಯುವ ಮಾಡೆಲ್ ಗುನ್’ಗುನ್ ಉಪಾಧ್ಯಾಯ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.


ಹನಿಟ್ರ್ಯಾಪ್’ಗಾಗಿ‌ ಬ್ಲ್ಯಾಕ್’ಮೇಲ್ ..!
ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ಸಚಿವರಾಗಿರುವ ಓರ್ವ ಸಚಿವನನ್ನು ಹನಿ ಟ್ರ್ಯಾಪ್ ಮಾಡಲು ಇವರಿಬ್ಬರು ಗುನ್’ಗುನ್’ಳನ್ನು ಒತ್ತಾಯ ಮಾಡುತ್ತಿದ್ದರು. ಆದರೆ ಆಕೆ ಅದಕ್ಕೆ ಒಪ್ಪಿರಲಿಲ್ಲ. ಬಳಿಕ ಗುನ್’ಗುನ್ ಸ್ನಾನ ಮಾಡುತ್ತಿರುವ ವೀಡಿಯೋ ಚಿತ್ರಿಕರಿಸಿದ್ದ ಆರೋಪಿಗಳು, ಹನಿಟ್ರ್ಯಾಪ್’ಗೆ ಸಹಕರಿಸದಿದ್ದರೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರು.

ಅಕ್ಷತ್ ಹಾಗೂ ದೀಪಾಲಿ ಕಡೆಯಿಂದ ಒತ್ತಡ ಹೆಚ್ಚಾದಾಗ ಹನಿಟ್ರ್ಯಾಪ್’ಗೆ ಸಹಕರಿಸುವ ಬದಲು ಗುನ್’ಗುನ್, ಕಳೆದ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಳು.

ಜೋಧಪುರದ ಹೊಟೇಲ್ ಲಾರ್ಡ್ಸ್ ಇನ್’ನಲ್ಲಿ ತಂಗಿದ್ದ ಯುವ ಮಾಡೆಲ್, 6ನೇ ಮಹಡಿಯಿಂದ ಜಿಗಿದಿದ್ದಳು. ಇದಕ್ಕೂ ಮೊದಲು ಗುನ್’ಗುನ್ ತನ್ನ ತಂದೆಗೆ ವೀಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು, ತನ್ನ ಮುಖವನ್ನು ಕೊನೆಯ ಬಾರಿಗೆ ನೋಡಿ‌ ಎಂದು ಹೇಳಿದ್ದಳು.
ಇದರಿಂದ ಗಾಬರಿಯಾದ ತಂದೆ, ಕೂಡಲೇ ಜೋಧಪುರ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೊಟೇಲ್ ತಲುಪುವಷ್ಟರಲ್ಲಿ ಆಕೆ 6ನೇ ಮಹಡಿಯಿಂದ ಜಿಗಿದಿದ್ದಳು. ಗಂಭೀರ ಗಾಯಗಳೊಂದಿಗೆ ಗುನ್’ಗುನ್ ಉಪಾಧ್ಯಾಯಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು..

Join Whatsapp
Exit mobile version