ಬೆಂಗಳೂರು: ಕಾರಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರನ್ನು ಚೇಸ್ ಮಾಡಿಕೊಂಡು ಬಂದು ಕಿರುಕುಳ ನೀಡಿದ ಇಬ್ಬರು ಬೈಕ್ ಸವಾರರನ್ನು ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತೇಜಸ್ ಮತ್ತು ಜಗನ್ನಾಥ್ ಗುರುತಿಸಲಾಗಿದೆ. ಮೂರನೇ ಆರೋಪಿ ಕಣ್ಣನ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಡಿವಾಳ-ಕೋರಮಂಗಲ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿ ಇಬ್ಬರು ಬೈಕ್ ಸವಾರರು ಕಿರುಕುಳ ನೀಡಿದ್ದಾರೆ.