Home ಟಾಪ್ ಸುದ್ದಿಗಳು ಮಧ್ಯಪ್ರದೇಶ | ಪಾದ ನೆಕ್ಕುವಂತೆ ಒತ್ತಾಯಿಸಿ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

ಮಧ್ಯಪ್ರದೇಶ | ಪಾದ ನೆಕ್ಕುವಂತೆ ಒತ್ತಾಯಿಸಿ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

ಭೋಪಾಲ್: ಯವಕನೊಬ್ಬನಿಗೆ ತನ್ನ ಪಾದಗಳನ್ನು ನೆಕ್ಕುವಂತೆ ವ್ಯಕ್ತಿಯೊಬ್ಬ ಒತ್ತಾಯ ಮಾಡಿರುವ ಮತ್ತೊಂದು ಘಟನೆ ಗ್ವಾಲಿಯರ್ ಜಿಲ್ಲೆಯ ದಾಬ್ರಾ ಪಟ್ಟಣದಲ್ಲಿ ವರದಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸಂತ್ರಸ್ತ ಯುವಕ ಮತ್ತು ಆರೋಪಿಗಳು ಒಂದೇ ಊರಿನವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಕಾರಿನಲ್ಲಿ ಕೂರಿಸಿಕೊಂಡು ಯುವಕನಿಗೆ ಪದೇ ಪದೇ ಆರೋಪಿಗಳು ಕಪಾಳ ಮೋಕ್ಷ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಕಾಣಬಹುದು. ಹಾಗೂ ಸಂತ್ರಸ್ತ ಯುವಕನಿಗೆ ಪಾದಗಳನ್ನು ನೆಕ್ಕುವಂತೆ ಎಂದು ಹೇಳಿರುವುದು ಮತ್ತು ಚಪ್ಪಲಿಗಳಿಂದ ಹೊಡೆಯುವುದನ್ನು ಕಾಣಬಹುದು. ವಿಡಿಯೊ ಕ್ಲಿಪ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Join Whatsapp
Exit mobile version