Home ಟಾಪ್ ಸುದ್ದಿಗಳು ಖ್ಯಾತ ಯೂಟ್ಯೂಬರ್ ‘ ಹಿಂದೂಸ್ಥಾನಿ ಭಾವು’ ಸೇರಿ ಇಬ್ಬರ ಬಂಧನ

ಖ್ಯಾತ ಯೂಟ್ಯೂಬರ್ ‘ ಹಿಂದೂಸ್ಥಾನಿ ಭಾವು’ ಸೇರಿ ಇಬ್ಬರ ಬಂಧನ

ಮುಂಬೈ: 10 ಮತ್ತು 12ನೇ ತರಗತಿಗಳಿಗೆ ಆನ್‌ ಲೈನ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರೇರೇಪಿಸಿದ ಆರೋಪದ ಮೇಲೆ ಪ್ರಸಿದ್ಧ ಯೂಟ್ಯೂಬರ್ ‘ಹಿಂದೂಸ್ಥಾನಿ ಭಾವು ಯಾನೆ ವಿಕಾಸ್ ಪಾಠಕ್’ ಸೇರಿದಂತೆ ಇಬ್ಬರನ್ನು ಧಾರಾವಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹಿಂದೂಸ್ತಾನಿ ಭಾವು ತನ್ನ ಇನ್ಸ್ಟಾಗ್ರಾಮ್‌ ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಮಹಾರಾಷ್ಟ್ರದ ಶಿಕ್ಷಣ ಸಚಿವ ವರ್ಷಾ ಗಾಯಕ್‌ ವಾಡ್ ಅವರ ನಿವಾಸದ ಬಳಿಯಿರುವ ಧಾರಾವಿ ಪ್ರದೇಶದಲ್ಲಿ ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವಂತೆ ಅವರು ಹೇಳಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಮಹಾರಾಷ್ಟ್ರದ ಮುಂಬೈನಲ್ಲಿರುವ ರಾಜ್ಯ ಶಿಕ್ಷಣ ಸಚಿವ ವರ್ಷಾ ಏಕನಾಥ್ ಗಾಯಕ್ವಾಡ್ ಅವರ ನಿವಾಸದ ಹೊರಗೆ ವಿದ್ಯಾರ್ಥಿಗಳು ಆಫ್‌ ಲೈನ್ ಪರೀಕ್ಷೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ ಗಳ ಅಡಿಯಲ್ಲಿ ವಿಕಾಸ್ ವಿರುದ್ಧ ಎಫ್‌ ಐಆರ್ ದಾಖಲಾಗಿದೆ.

Join Whatsapp
Exit mobile version