ಬೆಳಗಾವಿ: ನಗರದ ಐಟಿ-ಬಿಟಿ ಕ್ಯಾಂಪಿನಿಂದ ಇಂಡೋ ಟಿಬೆಟಿಯನ್ ಗಡಿ ಪೊಲೀಸರಿಗೆ ಸೇರಿದ ಎರಡು ಎಕೆ-47 ರೈಫಲ್ ಕಳವು ಆಗಿರುವ ಘಟನೆ ಐಟಿಬಿಟಿ ಕ್ಯಾಂಪಿನಿಂದ ಎರಡು ಎಕೆ-47 ರೈಫಲ್ ಕಳವು: ಸಾರ್ವಜನಿಕರಲ್ಲಿ ಆತಂಕನಡೆದಿದೆ.
ಕ್ಯಾಂಪ್ ನಲ್ಲಿ ಬಿಗಿ ಪೊಲೀಸ್ ಭದ್ರತೆ ನಡುವೆಯೂ ಎಕೆ-47 ರೈಫಲ್ ಗಳು ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂಡೋ ಟಿಬೆಟಿಯನ್ ಗಡಿ ಪೊಲೀಸರಾದ ರಾಜೇಶ್ ಕುಮಾರ, ಸಂದೀಪ ಮೀನಾ ಎಂಬುವವರಿಗೆ ಸೇರಿದ ಎರಡು ಎಕೆ – 47 ಕಳ್ಳತನವಾಗಿವೆ.
ನಕ್ಸಲ್ ನಿಗ್ರಹ ತರಬೇತಿಗಾಗಿ ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯು ಹಾಲಬಾವಿಗೆ ಆಗಮಿಸಿದೆ. ಈ ಕ್ಯಾಂಪಿನಿಂದಲೇ ಎಕೆ – 47 ರೈಫಲ್ ಗಳ ಕಳ್ಳತನವಾಗಿದೆ.
ಹಾಲಬಾವಿ ಗ್ರಾಮದ ಹೊರವಲಯದಲ್ಲಿ ಐಟಿಬಿಟಿ ಕ್ಯಾಂಪ್ನಲ್ಲಿ ಕಳೆದ ಆ.17ರ ರಾತ್ರಿ ರೈಫಲ್ ಗಳು ಕಳ್ಳತನವಾಗಿವೆ. ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡಸಿದ್ದಾರೆ. ಸುತ್ತಲೂ ಬಿಗಿ ಭದ್ರತೆ ಸರ್ಪಗಾವಲು ಇದ್ದರೂ ಒಳನುಗ್ಗಿ ಅತ್ಯಾಧುನಿಕ ಶಸ್ತ್ರಾಸ್ತ್ರ ಎಗರಿಸಿ ಪರಾರಿಯಾಗಿರುವುದು ಆತಂಕ ಮೂಡಿಸಿದೆ.
ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ಶೋಧಕಾರ್ಯ ನಡೆಸುತ್ತಿದೆ. ಕಳೆದ 24 ಗಂಟೆಗಳಿಂದಲೂ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಐಟಿಬಿಪಿಯಿಂದ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.