Home ಟಾಪ್ ಸುದ್ದಿಗಳು ಹೆಚ್ಚು ಕೆಲಸ ಮಾಡಿ ಎಂದ ಬೆನ್ನಲ್ಲೇ ಟ್ವಿಟರ್ ನಲ್ಲಿ ರಾಜೀನಾಮೆ ಪರ್ವ ಆರಂಭ

ಹೆಚ್ಚು ಕೆಲಸ ಮಾಡಿ ಎಂದ ಬೆನ್ನಲ್ಲೇ ಟ್ವಿಟರ್ ನಲ್ಲಿ ರಾಜೀನಾಮೆ ಪರ್ವ ಆರಂಭ

ನವದೆಹಲಿ: ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿ ಎಂದು ನೂತನ ಮಾಲೀಕ ಇಲಾನ್ ಮಸ್ಕ್ ಉದ್ಯೋಗಿಗಳಿಗೆ ಇಮೇಲ್ ಮಾಡಿದ ಬೆನ್ನಲ್ಲೇ,  ಟ್ವಿಟರ್’ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.

ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಿ. ಇಲ್ಲ ಮನೆಗೆ ಹೋಗಿ. ಟ್ವಿಟರ್ ಯಶಸ್ವಿಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಬೇಕು. ಈ ಬಗ್ಗೆ ಸಂಜೆ 5 ಗಂಟೆ (ಸ್ಥಳೀಯ ಕಾಲಮಾನ) ಒಳಗಾಗಿ ಉತ್ತರಿಸಿ ಎಂದು ಉದ್ಯೋಗಿಗಳಿಗೆ ಇಮೇಲ್ ಮೂಲಕ ನಿರ್ದೇಶನ ನೀಡಲಾಗಿತ್ತು.

ಇಮೇಲ್ ಬೆನ್ನಲ್ಲೇ , ಟ್ವಿಟರ್’ನ ನೂರಾರು ಉದ್ಯೋಗಿಗಳು ಸೆಲ್ಯೂಟ್ ಇಮೋಜಿ ಹಾಗೂ ವಿದಾಯ ಹೇಳುವ ಸಂದೇಶಗಳು ಹರಿದಾಡುತ್ತಿವೆ.

ಎಷ್ಟು ಮಂದಿ ಕೆಲಸ ತೊರೆದಿದ್ದಾರೆ ಎನ್ನುವ ನಿಖರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

Join Whatsapp
Exit mobile version