Home ಟಾಪ್ ಸುದ್ದಿಗಳು ಡೊನಾಲ್ಡ್ ಟ್ರಂಪ್ ಗೆ ಟ್ವಿಟರ್ ನಿಂದ ಶಾಶ್ವತ ನಿಷೇಧ

ಡೊನಾಲ್ಡ್ ಟ್ರಂಪ್ ಗೆ ಟ್ವಿಟರ್ ನಿಂದ ಶಾಶ್ವತ ನಿಷೇಧ

ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ ಶಾಶ್ವತ ನಿಷೇಧ ಹೇರಿದೆ.

ಮುಂಬರುವ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷೀಯ ಅಭ್ಯರ್ಥಿಯಾದರೂ, ಟ್ವಿಟರ್ ಹೇರಿರುವ ನಿಷೇಧವನ್ನು ತೆರವುಗೊಳಿಸುವುದಿಲ್ಲ ಎಂದು ಟ್ವಿಟರ್ ನ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಹೇಳಿದ್ದಾರೆ.

“ನಮ್ಮ ನೀತಿಗಳು ಹೇಗೆ ಕೆಲಸ ಮಾಡುತ್ತವೆ ಎಂದರೆ, ಒಂದು ಬಾರಿ ನಿಮ್ಮನ್ನು ನಮ್ಮ ವೇದಿಕೆಯಿಂದ ತೆಗೆದು ಹಾಕಿದ ಮೇಲೆ, ನೀವು ಕಾಮೆಂಟ್ ಮಾಡುವವರಾಗಿರಿ, ಸಿಎಫ್ ಒ ಆಗಿರಿ, ನೀವು ಮಾಜಿ ಅಥವಾ ಹಾಲಿ ಸಾರ್ವಜನಿಕ ಅಧಿಕಾರಿಯಾಗಿರಿ, ಒಂದೇ ಪರಿಣಾಮವಿರುತ್ತದೆ” ಎಂದು ಅವರು ಹೇಳಿದ್ದಾರೆ.

“ಜನರು ಹಿಂಸಾಚಾರಕ್ಕೆ ಪ್ರಚೋದನೆ ನೀಡದಂತೆ ನಮ್ಮ ವೇದಿಕೆಯ ನೀತಿಗಳು ರೂಪಿಸಲ್ಪಟ್ಟಿವೆ. ಯಾರಾದರೂ, ಆ ಕೆಲಸ ಮಾಡಿದರೆ, ನಾವು ಅವರನ್ನು ನಮ್ಮ ಸೇವೆಯಿಂದ ತೆಗೆದು ಹಾಕಬೇಕಾಗುತ್ತದೆ ಮತ್ತು ನಮ್ಮ ನೀತಿಗಳು ಅಂತವರು ಮತ್ತೆ ಹಿಂದಿರುಗುವುದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಸೆಗಲ್ ಹೇಳಿದ್ದಾರೆ.

ಒಂದು ತಿಂಗಳ ಹಿಂದೆ ಟ್ವಿಟರ್ ಡೊನಾಲ್ಡ್ ಟ್ರಂಪ್ ಗೆ ನಿಷೇಧ ಹೇರಿತ್ತು. ವಾಷಿಂಗ್ಟನ್ ಡಿಸಿಯಲ್ಲಿ ಕ್ಯಾಪಿಟಲ್ ಹಿಲ್ ಮೇಲೆ ಸಂಭವಿಸಿದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಅವರನ್ನು ಟ್ವಿಟರ್ ನಿಂದ ತೆಗೆಯಲಾಗಿತ್ತು.

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ, ಅಧಿಕಾರ ಬಿಟ್ಟುಕೊಡಲು ಸಿದ್ಧರಿಲ್ಲದ ಟ್ರಂಪ್ ಮಾಡಿದ್ದ ಟ್ವಿಟ್ ಒಂದು ಹಿಂಸಾಚಾರಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು.

Join Whatsapp
Exit mobile version