ಹೊಸ ಐಟಿ ನಿಯಮ ಪಾಲಿಸದ ಟ್ವಿಟರ್‌ ಗೆ ಭಾರತದಲ್ಲಿ ಕಾನೂನು ರಕ್ಷಣೆ ಇಲ್ಲ

Prasthutha|

ನವದೆಹಲಿ : ಕೇಂದ್ರದ ಹೊಸ ಐಟಿ ನಿಯಮಗಳಿಗೆ ಬದ್ಧರಾಗಲು ವಿಫಲವಾಗಿರುವುದರಿಂದ ಟ್ವಿಟರ್‌ ಭಾರತದಲ್ಲಿ ಕಾನೂನು ರಕ್ಷಣೆಗಳನ್ನು ಕಳೆದುಕೊಂಡಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ವಿವಿಧ ಪ್ರಮುಖ ಅಧಿಕಾರಿಗಳನ್ನು ಟ್ವಿಟರ್‌ ನೇಮಿಸಲ್ಲವಾದುದರಿಂದ, ಅದು ತನ್ನ ಕಾನೂನು ಬೆಂಬಲವನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.

- Advertisement -

ಸಚಿವಾಲಯದಿಂದ ಪತ್ರಗಳನ್ನು ಬರೆದಿದ್ದರೂ, ಹೊಸ ನಿಯಮಗಳನ್ನು ಟ್ವಿಟರ್‌ ಪಾಲಿಸಿಲ್ಲ ಎಂದು ಮೂಲಗಳು ಬುಧವಾರ ತಿಳಿಸಿವೆ.

ಆದರೆ, ಭಾರತ ಸರಕಾರದ ನಿಯಮಗಳನ್ನು ಪಾಲಿಸಲು ಬದ್ಧರಾಗಿದ್ದೇವೆ ಮತ್ತು ಮಧ್ಯಂತರ ಮುಖ್ಯ ಪರಿಹಾರ ಅಧಿಕಾರಿಯನ್ನು ನೇಮಿಸಿದ್ದೇವೆ ಎಂದು ಟ್ವಿಟರ್‌ ಮಂಗಳವಾರ ತಿಳಿಸಿದೆ.  

Join Whatsapp