Home ಟಾಪ್ ಸುದ್ದಿಗಳು ಬಿಬಿಎಂಪಿ ನೂತನ ಆಯುಕ್ತರಾಗಿ ತುಷಾರ್ ಗಿರಿನಾಥ್ ಆಯ್ಕೆ

ಬಿಬಿಎಂಪಿ ನೂತನ ಆಯುಕ್ತರಾಗಿ ತುಷಾರ್ ಗಿರಿನಾಥ್ ಆಯ್ಕೆ

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಫ್ತಾ ಎಂಬವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಅವರ ಸ್ಥಾನಕ್ಕೆ ತುಷಾರ್ ಗಿರಿನಾಥ್ ಅವರನ್ನು ಆಯ್ಕೆಗೊಳಿಸಿ ಆದೇಶ ಹೊರಡಿಸಿದೆ.

ಪ್ರಸಕ್ತ ಗೌರವ್ ಗುಫ್ತಾ ಅವರು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಎಸಿಎಸ್ ಆಗಿ ವರ್ಗಾವಣೆ ಹೊಂದಿದ್ದು, ಇವರ ಜೊತೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೆ. ಅನಿಲ್ ಕುಮಾರ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಹಿರಿಯ ಐಎಎಸ್ ಅಧಿಕಾರಿ ವಿ. ಪೊನ್ನುರಾಜ್ ಅವರನ್ನು ಕೆಪಿಸಿಎಲ್ ನ ನಿರ್ದೇಶಕರಾಗಿಯೂ, ಮನೋಜ್ ಕುಮಾರ್ ಜೈನ್ ಅವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಆಗಿ ಆಯ್ಕೆಗೊಳಿಸಲಾಗಿದೆ.

ಖುಷ್ಬು ಸಿ ಚೌಧರ್ ಅವರನ್ನು ನವದೆಹಲಿಯ ಕಂದಾಯ ಭವನದ ಡೆಪ್ಯುಟಿ ರೆಸಿಡೆಂಟ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಸ್ಥಾನದಲ್ಲಿದ್ದ ಪ್ರಸನ್ನ ಹೆಚ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ಅವರನ್ನು ವರ್ಗಾಯಿಸಿ ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ಎಂ.ಜಿ ಹಿರೇಮಠ್ ಅವರನ್ನು ವರ್ಗಾವಣೆ ಮಾಡಿ, ಕೆಆರ್ ಐಡಿಎಲ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಈ ಮಧ್ಯೆ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರನ್ನು, ಬೆಳಗಾವಿ ಜಿಲ್ಲಾಧಿಕಾರಿ ಆಗಿ ನೇಮಕ ಮಾಡಲಾಗಿದೆ.ಉಡುಪಿ ಜಿಲ್ಲಾ ಪಂಚಾಯತಿ ಸಿಇಓ ಡಾ.ನವೀನ್ ಭಟ್ ವೈ ಅವರನ್ನು, ಕೆಎಸ್ಆರ್ ಟಿ ಸಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಿಇಓ ಟಿ. ಭೂ‌ ಬಾಲನ್ ಅವರನ್ನು ಭಾಗಲಕೋಟೆ ಜಿಲ್ಲಾಧಿಕಾರಿ ಆಗಿ ನೇಮಕ ಮಾಡಲಾಗಿದ್ದು, ಕಲಬುರ್ಗಿ ಸಿಇಓ ಡಾ.ದಿಲೀಶ್ ಶಶಿ ಅವರನ್ನು, ಡಿಪಿಎಆರ್ ನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಇನ್ನೂ ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಎಸ್. ಭಾರತ್ ಅವರನ್ನು ಎನ್ ಡಬ್ಲ್ಯೂಕೆಆರ್ ಟಿಸಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಎಂ.ಶಿಲ್ಪ ಅವರನ್ನು ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ನಿರ್ದೇಶಕಿಯಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಭವನದ ಡೆಪ್ಯುಟಿ ರೆಸಿಡೆಂಟ್ ಕಮಿಷನರ್ ಆಗಿದ್ದ ಹೆಚ್ ಪ್ರಸನ್ನ ಅವರನ್ನು, ಉಡುಪಿ ಜಿಲ್ಲಾ ಪಂಚಾಯತಿಯ ಸಿಇಓ ಆಗಿ ನೇಮಕ ಮಾಡಲಾಗಿದೆ. ಕೊಳ್ಳೇಗಾಲದ ಎಸಿ ಡಾ.ಗಿರೀಶ್ ದಿಲೀಪ್ ಬಾದೊಲೆ ಅವರನ್ನು ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version