Home ಟಾಪ್ ಸುದ್ದಿಗಳು 50 ವಯಸ್ಸಾಯ್ತು, ಯಾರನ್ನಾದರೂ ಹುಡುಕಿಕೊಳ್ಳಿ: ರಾಹುಲ್​ ಗಾಂಧಿಗೆ ಉವೈಸಿ ಸಲಹೆ

50 ವಯಸ್ಸಾಯ್ತು, ಯಾರನ್ನಾದರೂ ಹುಡುಕಿಕೊಳ್ಳಿ: ರಾಹುಲ್​ ಗಾಂಧಿಗೆ ಉವೈಸಿ ಸಲಹೆ

ಹೈದರಾಬಾದ್: ರಾಹುಲ್ ಗಾಂಧಿಗೆ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀಮ್ ಉವೈಸಿ ಬಿಟ್ಟಿ ಸಲಹೆ ನೀಡಿದ್ದು, ಗಮನ ಸೆಳೆದಿದೆ. ನೀವು ಮಾತನಾಡುವ ಮುನ್ನ ಯೋಚಿಸಿ, ನಿಮಗೆ 50 ವರ್ಷ ದಾಟಿದೆ. ಒಂಟಿತನ ನಿಮ್ಮನ್ನು ಕಾಡುತ್ತಿರಬೇಕು, ಯಾರನ್ನಾದರೂ ಹುಡುಕಿ ಎಂದು ಉವೈಸಿ ರಾಹುಲ್ ಗಾಂಧಿಗೆ ಹೇಳಿದ್ದಾರೆ.

ಅಸಾದುದ್ದೀನ್ ಉವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಸ್ನೇಹಿತ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಉವೈಸಿ ಈ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

ನಾವು ಯಾರಿಗೂ ತೊಂದರೆ ನೀಡುವುದಿಲ್ಲ, ಆದರೆ, ಯಾರಾದರೂ ನಮ್ಮನ್ನು ಚುಡಾಯಿಸಿದರೆ ನಾವು ಅವರನ್ನು ಬಿಡುವುದಿಲ್ಲ ಎಂದು ಇದೇ ಸಂದರ್ಭ ಹೇಳಿದ್ದಾರೆ

Join Whatsapp
Exit mobile version