ಏರ್ ಇಂಡಿಯಾ ಸಿಇಒ ಆಗಿ ಟರ್ಕಿಯ ಇಲ್ಕ್ಯಾಶ್ ಈಸೈ ನೇಮಕ

Prasthutha|

ನವದೆಹಲಿ: ಏರ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಟರ್ಕಿ ಮೂಲದ ಇಲ್ಕ್ಯಾಶ್‌ ಈಸೈ  ಅವರನ್ನು ನೇಮಕ ಮಾಡಿರುವುದಾಗಿ ಟಾಟಾ ಸನ್ಸ್‌ ಸೋಮವಾರ ಪ್ರಕಟಿಸಿದೆ.

- Advertisement -

ಇತ್ತೀಚಿನ ವರೆಗೂ ಟರ್ಕಿಷ್‌ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ ಇಲ್ಕ್ಯಾಶ್‌ ಈಸೈ (51), ಏಪ್ರಿಲ್‌ 1 ಅಥವಾ ಅದಕ್ಕೂ ಮುಂಚೆಯೇ ‘ಏರ್ ಇಂಡಿಯಾದ’ ಹೊಣೆಗಾರಿಕೆ ವಹಿಸಲಿದ್ದಾರೆ. ಟಾಟಾ ಸನ್ಸ್‌ ಅಡಿಯಲ್ಲಿ ಏರ್‌ ಇಂಡಿಯಾಗೆ ಇಲ್ಕ್ಯಾಶ್‌ ಮೊದಲ ಸಿಇಒ ಮತ್ತು ಎಂಡಿ ಆಗಲಿದ್ದಾರೆ.

‘ಇಲ್ಕ್ಯಾಶ್‌ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಟರ್ಕಿಷ್‌ ಏರ್‌ಲೈನ್ಸ್‌ ಅನ್ನು ಈಗಿರುವ ಯಶಸ್ಸಿನ ಮಟ್ಟಗೆ ತೆಗೆದುಕೊಂಡು ಹೋಗಿದ್ದಾರೆ. ಅವರನ್ನು ಟಾಟಾ ಗ್ರೂಪ್‌ಗೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಅವರು ಏರ್‌ ಇಂಡಿಯಾ ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ.. ‘ ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್‌ ಹೇಳಿದ್ದಾರೆ.



Join Whatsapp