ಹೈದರಾಬಾದ್ : ಕೋವಿಡ್ ಸಾಂಕ್ರಾಮಿಕತೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟರ್ಕಿ ಭಾರತಕ್ಕೆ ವೈದ್ಯಕೀಯ ನೆರವು ರವಾನೆಗೊಳಿಸಿದೆ. ಅಂಕಾರದ ಎಟಿಮೆಸ್ಗಟ್ ವಿಮಾನ ನಿಲ್ದಾಣದ ಮೂಲಕ ವೈದ್ಯಕೀಯ ನೆರವು ಹೊಂದಿದ ವಿಮಾನ ಭಾರತಕ್ಕೆ ಹೊರಟಿದೆ.
ಕೋವಿಡ್ ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಸಲಕರಣೆಗಳನ್ನು ಹೊಂದಿದ ಎರಡು ವಿಮಾನಗಳು ಅಂಕಾರದ ಎಟಿಮೆಸ್ಗಟ್ ವಿಮಾನ ನಿಲ್ದಾಣದಿಂದ ಹೊರಟಿವೆ ಎಂದು ಟರ್ಕಿಷ್ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿ ತಿಳಿಸಿದೆ.
೬೩೦ ಆಕ್ಸಿಜನ್ ಟ್ಯೂಬ್ ಗಳು, ಐದು ಆಕ್ಸಿಜನ್ ಜನರೇಟರ್ ಗಳು, ೫೦ ವೆಂಟಿಲೇಟರ್ ಗಳು ಮತ್ತು ಟರ್ಕಿ ಆರೋಗ್ಯ ಸಚಿವಾಲಯ ಮತ್ತು ಟರ್ಕಿಷ್ ರೆಡ್ ಕ್ರೆಸೆಂಟ್ ಸಿದ್ಧಪಡಿಸಿದ ಔಷಧೀಯ ಟ್ಯಾಬ್ಲೆಟ್ ಗಳುಳ್ಳ ೫೦,೦೦ ಪೆಟ್ಟಿಗೆಗಳು ಈ ವಿಮಾನಗಳಲ್ಲಿವೆ ಎಂದು ವರದಿಗಳು ತಿಳಿಸಿವೆ.