Home ಟಾಪ್ ಸುದ್ದಿಗಳು ತಜ್ಞರು ಹೇಳಿದಂತೆ ತುಂಗಭದ್ರಾ ಜಲಾಶಯ ನಿರ್ವಹಣೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ತಜ್ಞರು ಹೇಳಿದಂತೆ ತುಂಗಭದ್ರಾ ಜಲಾಶಯ ನಿರ್ವಹಣೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ಕೊಪ್ಪಳ: 70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೇಟ್ ಮುರಿದಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ. ಗೇಟ್ ಈಗಾಗಲೇ ತಯಾರು ಮಾಡಲಾಗುತ್ತಿದೆ ನಾಳೆಯಿಂದ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ತುಂಗಭದ್ರಾ ಜಲಾಶಯದಲ್ಲಿ ಮಾತನಾಡಿದ ಅವರು, ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ಅವರು ಬಹಳ ಅನುಭವಿ, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಅಳವಡಿಕೆ ನಡೆಯುತ್ತದೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು ಇನ್ಮುಂದೆ ತಜ್ಞರು ಹೇಳಿದಂತೆ ಜಲಾಶಯ ನಿರ್ವಹಣೆ ಮಾಡಲಾಗುತ್ತದೆ ಎಂದರು.

ಈ ಹಿಂದೆ ಗೇಟ್ ಮುರಿದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಅವರು, ಇತಿಹಾಸದಲ್ಲಿ ಈ ಹಿಂದೆ ಯಾವತ್ತೂ ಗೇಟ್ ಮುರಿದಿಲ್ಲ. ಸದ್ಯಕ್ಕೆ ನೀರು ನಿಲ್ಲಿಸುವುದೇ ನಮಗೆ ಸವಾಲು ಎಂದರು.

Join Whatsapp
Exit mobile version